ಮೈಸೂರಲ್ಲಿ ಜೂ.20ರಂದು ಕಾರುಗಳ ಕಾರ್ಬಾರು; ಪಾಶ್ಚಾತ್ಯರ ದರ್ಬಾರು..!
ಮೈಸೂರಲ್ಲಿ ಜೂ.20ರಂದು ಕಾರುಗಳ ಕಾರ್ಬಾರು; ಪಾಶ್ಚಾತ್ಯರ ದರ್ಬಾರು..!
ಜೂನ್ 20ರಂದು ಮೈಸೂರಿಗೆ ಬಂದು ತಲುಪಲಿರುವ ಲಂಡನ್-ಸಿಡ್ನಿ ಮ್ಯಾರಥಾನ್ ಕಾರುಗಳು
ಮೈಸೂರಿನ ಲಲಿತ ಮಹಲ್ ಹೋಟೆಲ್ ಪ್ರಾಂಗಣದಲ್ಲಿ ಕಾರುಗಳನ್ನು ನಿಲ್ಲಿಸಲಾಗುತ್ತದೆ. ಲಲಿತ ಮಹಲ್‌ನ ಎಲ್ಲ ರೂಮುಗಳೂ ಬುಕ್ ಆಗಿಬಿಟ್ಟಿದೆ. ಆಗಮಿಸಲಿರುವ ಅಥಿತಿಗಳನ್ನು ಸತ್ಕರಿಸುವುದು ಬೇಡವೇ? ಹೇಳಿಕೇಳಿ ಅದು ಒಡೆಯರ ಒಡೆತನದ ಜಾಗ. ಅಥಿತಿ ದೇವೋ ಭವ ಎಂದು ಅರಿತಿರುವ ಕನ್ನಡಿಗರು ಈಗಿನಿಂದಲೇ ಆಗವಿಸಲಿರುವವರನ್ನು ಹೇಗೆ ಉಪಚರಿಸಬೇಕೆಂಬ ತಯಾರಿಯಲ್ಲಿದ್ದಾರೆ.
ರ್ಯಾಲಿಯ ಕಾರುಗಳು ಮರುದಿನ ಜೂನ್ 21ರಂದು ಪುನಃ ಮರಳಲಿದೆ. ಮೈಸೂರು ಮತ್ತು ಬೆಂಗಳೂರಿಗರಿಗೆ ವಿಶೇಷ ರ್ಯಾಲಿ ಕಾರುಗಳನ್ನು ವೀಕ್ಷಿಸಲು ಇದೊಂದು ಸದವಕಾಶ. ಜೂನ್ 20ರ ಸಂಜೆ 5ರ ನಂತರ ಈ ಅಪರೂಪದ ಕಾರುಗಳನ್ನು ನೋಡಲಿಚ್ಛಿಸುವವರು ಬರಬಹುದು.
ಯಾಕೆ ಒಮ್ಮೆ ಹೋಗಿ ನೋಡಬಾರದು? 20ರ ಸಂಜೆಯನ್ನ ಮೈಸೂರಿನಲ್ಲಿ ಕಳೆಯೋಣ. ಏನಂತೀರಿ?
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications