‘ಹೈಟೆಕ್ ಹೆರಿಗೆ’ ಯೋಗ ಬಡಮಹಿಳೆಗೂ ಸಿಗುವಂತೆ ಮಾಡಿದ ಪಾಲಿಕೆ
‘ಹೈಟೆಕ್ ಹೆರಿಗೆ’ ಯೋಗ ಬಡಮಹಿಳೆಗೂ ಸಿಗುವಂತೆ ಮಾಡಿದ ಪಾಲಿಕೆ
ಪಾಲಿಕೆಯು ಜಪಾನಿನ ಕಂಟ್ರಾಸೆಪ್ಟಿವ್ ಅಪ್ಲಯನ್ಸ್ ಅನುದಾನ ದ ನೆರವಿನಿಂದ 3.5 ಕೋಟಿ ರೂಪಾಯಿಗಳ ವೈದ್ಯಕೀಯ ಉಪಕರಣಗಳನ್ನು ಪಾಲಿಕೆ ಸ್ವಾಮ್ಯಕ್ಕೊಳಪಟ್ಟಿರುವ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ತಂದಿರಿಸಿದೆ.
ಪಾಲಿಕೆಯು ಜಪಾನಿನ ಕಂಟ್ರಾಸೆಪ್ಟಿವ್ ಅಪ್ಲಯನ್ಸ್ ಅನುದಾನ ದ ನೆರವಿನಿಂದ 3.5 ಕೋಟಿ ರೂಪಾಯಿಗಳ ವೈದ್ಯಕೀಯ ಉಪಕರಣಗಳನ್ನು ಪಾಲಿಕೆ ಸ್ವಾಮ್ಯಕ್ಕೊಳಪಟ್ಟಿರುವ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ತಂದಿರಿಸಿದೆ. ಉಪಕರಣಗಳನ್ನು ಬಳಸುವ ಬಗ್ಗೆ ಹತ್ತು ಮಂದಿ ವೈದ್ಯರುಗಳಿಗೆ ತರಬೇತಿಯನ್ನೂ ನೀಡಲಾಗಿದೆ. ಶಸ್ತಚಿಕಿತ್ಸೆಗಳಲ್ಲಿ ಬಳಸುವ ಅತ್ಯಾಧುನಿಕವಾದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ ಟೆಲಿಸ್ಕೋಪ್‌ಗಳನ್ನು ತರಿಸಲಾಗಿದೆ.
ಪ್ರಸವಕ್ಕಿಂತ ಮುನ್ನ ಕ್ಯಾನ್ಸರ್ ಪತ್ತೆ ಹಚ್ಚುವ ಯಂತ್ರವನ್ನೂ ಅಮೆರಿಕಾದಿಂದ ತರಿಸಲಾಗಿದೆ. ಗರ್ಭಿಣಿಯರು ಕೇವಲ ಎರಡೇ ದಿನಗಳಲ್ಲಿ ಗುಣಮುಖರಾಗಿ ಮನೆಗೆ ಹೋಗಬಹುದಾದ ವ್ಯವಸ್ಥೆ ಈಗ ನಮ್ಮಲ್ಲಿದೆ ಎಂದು ಆರೋಗ್ಯ ಅಧಿಕಾರಿ ಡಾ. ನಾಗರತ್ನ ಸುದ್ದಿಗಾರರಿಗೆ ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥೆಗಳನ್ನು ವೀಕ್ಷಿಸಿದ ಮೇಯರ್ ಪಿ.ಆರ್. ರಮೇಶ್ ಅವರು ಸಧ್ಯದಲ್ಲಿ ಬನಶಂಕರಿ, ಹಿಸಹಳ್ಳಿಯ ರೆಫರಲ್ ಆಸ್ಪತ್ರೆಗಳಿಗೂ ಈ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಸಿದ್ಧಯ್ಯ ರಸ್ತೆ, ಜೆ.ಜೆ. ನಗರ, ಹಲಸೂರು, ಶ್ರೀರಾಮಪುರ ರೆಫರಲ್ ಆಸ್ಪತ್ರೆಗಳಲ್ಲಿ ಈಗಾಗಲೇ ಈ ಉಪಕರಣಗಳನ್ನು ಬಳಸಲೆಂದು ನೀಡಲಾಗಿದೆ. ಜಯನಗರದ ಆಸ್ಪತ್ರೆಯನ್ನು ನವೀಕರಣ ಮಾಡಲಾಗುತ್ತಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications