ಖಾತೆ ಹಂಚಿಕೆ ಕ್ಯಾತೆ: ಗೃಹಖಾತೆಗಾಗಿ ಪಟ್ಟುಬಿದ್ದ ಮೈತ್ರಿಕೂಟದ ಮಿತ್ರರು
ಖಾತೆ ಹಂಚಿಕೆ ಕ್ಯಾತೆ: ಗೃಹಖಾತೆಗಾಗಿ ಪಟ್ಟುಬಿದ್ದ ಮೈತ್ರಿಕೂಟದ ಮಿತ್ರರು
ಸಿದ್ಧರಾಮಯ್ಯ ಖಾತೆ ರಹಿತ ಮಂತ್ರಿಯಾಗಿ 11ದಿನ
ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಮಾಣವಚನ ಸ್ವೀಕರಿಸಿ 11 ದಿನಗಳಾದರೂ ಖಾತೆ ರಹಿತರಾಗಿಯೇ ಉಳಿದಿದ್ದಾರೆ. ಪಿ.ಜಿ.ಆರ್.ಸಿಂಧ್ಯಾ ಗೃಹ ಖಾತೆ ತಮಗೆ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಪಕ್ಷವು ಗೃಹ ಖಾತೆ ತಮಗೆ ಬೇಕೆಂದು ಎಂದು ಪಟ್ಟು ಹಿಡಿದಿದೆ. ಇದರಿಂದ ಗೃಹ ಖಾತೆಯು ಮುಖ್ಯಮಂತ್ರಿಗಳ ಬಳಿ ಉಳಿದು ಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಖಾತೆ ಹಂಚಿಕೆ ಕಾರ್ಯ ಸದ್ಯದಲ್ಲೇ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಧರ್ಮಸಿಂಗ್ ಹೇಳಿದ್ದಾರೆ.
ಈ ನಡುವೆ ಕೇರಳದ ಹೆಚ್ಚುವರಿ ಅಧಿಕಾರ ಹೊತ್ತಿರುವ ರಾಜ್ಯಪಾಲ ಟಿ.ಎನ್.ಚತುರ್ವೇದಿ ಜೂನ್.8ರ ಮಂಗಳವಾರ ಸಂಜೆ ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ.
(ಇನ್ಫೋ ವಾರ್ತೆ/ಪಿಟಿಐ)
ಮುಖಪುಟ / ಧರ್ಮ-ಕಾರಣ












Click it and Unblock the Notifications