ಮೊದಲು 10 ಸಚಿವರ ಪ್ರಮಾಣ ವಚನ : ಜೆಡಿಎಸ್-5, ಕಾಂಗ್ರೆಸ್-5
ಮೊದಲು 10 ಸಚಿವರ ಪ್ರಮಾಣ ವಚನ : ಜೆಡಿಎಸ್-5, ಕಾಂಗ್ರೆಸ್-5
ಕೆಪಿಸಿಸಿ ಅಧ್ಯಕ್ಷ ಮತ್ತು ದೇಶ್‌ಮುಖ್ ಎತ್ತಂಗಡಿ ಸಾಧ್ಯತೆ
ಜಾತ್ಯತೀತ ಜನತಾ ದಳದ ಐವರು ಮತ್ತು ಕಾಂಗ್ರೆಸ್‌ನ ಐವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜೆಡಿಎಸ್ ಸಂಭಾವಿತ ಸಚಿವರ ಪಟ್ಟಿ ಈ ಹಿಂದೆಯೇ ಸಿದ್ಧವಾಗಿದೆ. ಕಾಂಗ್ರೆಸ್ ಅಂತಿಮ ಪಟ್ಟಿ ಸಿದ್ಧವಾಗದ ಕಾರಣ ಕೇವಲ 10 ಮಂದಿ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿರುವರು.
ನವದೆಹಲಿಯ ದೇವೇಗೌಡರ ನಿವಾಸದಲ್ಲಿ ಜೂ.4 ಶುಕ್ರವಾರ ನಡೆದ ಮಾತುಕತೆಯಲ್ಲಿ ಈ ಅಂತಿಮ ನಿರ್ಣಯಕ್ಕೆ ಬರಲಾಗಿದೆ. ಗೃಹ ಖಾತೆ ತನಗೆ ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿತ್ತು. ಅದಕ್ಕೆ ಒಪ್ಪಿದ ಜೆಡಿಎಸ್ ಆ ಖಾತೆಯನ್ನು ಧರ್ಮಸಿಂಗ್ ತಮ್ಮಲ್ಲೇ ಉಳಿಸಿಕೊಳ್ಳಬೇಕೆಂದು ಷರತ್ತು ವಿಧಿಸಿದೆ. ಹಾಗೂ ಭಾರೀ ನೀರಾವರಿ ಖಾತೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ಕಂದಾಯ ಖಾತೆಯನ್ನು ಒಪ್ಪಿಕೊಂಡಿದೆ.
ಹೊಂದಾಣಿಕೆ ಮಾತುಕತೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜನಾರ್ಧನ ಪೂಜಾರಿ ಅಪಸ್ವರ ಎಬ್ಬಿಸಿದ್ದರು. ಸಂಪುಟ ರಚನೆ ಕುರಿತ ಮಾತುಕತೆಯಲ್ಲಿ ಪಕ್ಷದ ರಾಜ್ಯ ಉಸ್ತುವಾರಿ ವಿಲಾಸ್‌ರಾವ್ ದೇಶ್‌ಮುಖ್ ಡಿಕೆಶಿ ಪರ ವಕಾಲತು ನಡೆಸಿದ್ದರು. ಈ ಕುರಿತು ದೇವೇಗೌಡ ಸೋನಿಯಾ ಗಾಂಧಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಅವರು ಎತ್ತಂಗಡಿಯಾಗುವ ಸಂಭವವಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ












Click it and Unblock the Notifications