ಮೋಸ್ಟ್ ವಾಂಟೆಡ್ ಮ್ಯಾನ್ ದಾವೂದ್‌ನ ಅಪರಾಧ ಚಿತ್ರಣಗಳ ಪುಸ್ತಕ
ಮೋಸ್ಟ್ ವಾಂಟೆಡ್ ಮ್ಯಾನ್ ದಾವೂದ್‌ನ ಅಪರಾಧ ಚಿತ್ರಣಗಳ ಪುಸ್ತಕ
ಪತ್ರಕರ್ತ, ಛಾಯಾಗ್ರಾಹಕ ಗಿಲ್ಬರ್ಟ್ ಕಿಂಗ್‌ನ ‘ದ ಮೋಸ್ಟ್ ಡೇಂಜರಸ್ ಮೆನ್ ಇನ್ ದ ವರ್ಲ್ಡ್’
ಪಾಶ್ಚಾತ್ಯ ಪತ್ರಕರ್ತ, ಬರಹಗಾರ, ಅಂಕಣಕಾರ, ಕಾದಂಬರಿಕಾರನಾಗಿರುವ ಗಿಲ್ಬರ್ಟ್ ಕಿಂಗ್ ದಾವೂದ್ ಇಬ್ರಾಹಿಂನ ಜೀವನದ ಸತ್ಯ ಘಟನೆಗಳನ್ನು ತೆರೆದಿಡುವ ಪುಸ್ತಕವನ್ನು ಬರೆಯುವ ಸಾಹಸಕ್ಕೆ ಕೈ ಹಾಕಿದ್ದಾರೆ. ಗಿಲ್ಬರ್ಟ್, ‘ಶಾಕ್ ಅಂಡ್ ಟೆರ್ರಿಫೈ’ ಪತ್ರಿಕೆಯ ಓದುಗರಿಗೆ ನಿಮ್ಮ ಕೈಗೆ ದಾವೂದ್ ಬಗೆಗಿನ ವಿವರಗಳ ಪುಸ್ತಕವನ್ನಿಡುತ್ತೇನೆಂದು ಮಾತು ಕೊಟ್ಟಿದ್ದಾರೆ.
ಗಿಲ್ಬರ್ಟ್ ಕಿಂಗ್ ಅವರ ‘ದ ಮೋಸ್ಟ್ ಡೇಂಜರಸ್ ಮೆನ್ ಇನ್ ದ ವರ್ಲ್ಡ್’ ಪುಸ್ತಕವು ದಾವೂದ್ ಮುಂಯಿಯ ರಸ್ತೆಯ ಬದಿಯಲ್ಲಿ ಬಡತನದಿಂದ ಕಂಗೆಡುತ್ತಿದ್ದ ಕಾಲದಿಂದ, ಜಗತ್ತಿನ ಅತ್ಯಂತ ಭುೂಂನಕ ಅಂತರರಾಷ್ಟ್ರೀಯ ಅಪರಾಧಿಗಳ ಒಕ್ಕೂಟವೆಂದೇ ಕುಖ್ಯಾತಿವೆತ್ತ ‘ಡಿ ಕಂಪೆನಿ’ ಯನ್ನು ಹುಟ್ಟು ಹಾಕಿದವರೆಗಿನ ಹಂತ ಹಂತವನ್ನೂ ವಿವರಿಸುತ್ತದೆ.
ದಾವೂದ್ ಇಬ್ರಾಹಿಂ ಮೇಲೆ ಪುಸ್ತಕಗಳನ್ನು ಬರೆಯಲು ಈವರೆಗೆ ಹಲವರು ಪ್ರಯತ್ನಿಸಿದ್ದರೂ ಅದು ಆಗಿರಲಿಲ್ಲ. ಗಿಲ್ಬರ್ಟ್ ಆ ಕೆಲಸ ಮಾಡುವಲ್ಲಿ ಯಶಸ್ಸು ಗಳಿಸಿದ್ದಾರೆ. ಇದಕ್ಕೂ ಮುಂಚೆ ಗಿಲ್ಬರ್ಟ್ ಬರೆದ ‘ದ ಡರ್ಟಿ ಬಾಂಬ್: ವೆಪನ್ ಆಫ್ ಮಾಸ್ ಡಿಸ್ರಪ್ಶನ್’ ಪುಸ್ತಕ ಕೂಡ ಓದುಗನ ತೃಷೆಯನ್ನು ನೀಗಿಸುವಲ್ಲಿ ಸಫಲವಾಗಿತ್ತು. ಅದರಲ್ಲಿ ಬಾಂಬಿನ ಇತಿಹಾಸ, ತಂತ್ರಜ್ಞಾನ, ಬಾಂಬ್ ದಾಳಿಯಾದಾಗ ತೆಗೆದುಕೊಳಬಹುದಾದ ಕ್ರಮಗಳ ಬಗ್ಗೆ ಸ್ಥೂಲ ವಿವರ ನೀಡಲಾಗಿತ್ತು.
(ಏಜನ್ಸೀಸ್)
ಮುಖಪುಟ / ವಾಟ್ಸ್ ಹಾಟ್












Click it and Unblock the Notifications