ಜಾದೂ ಸಾಮ್ರಾಟ ಪ್ರೊ.ಶಂಕರ್‌ಗೆ ಆರ್ಡರ್‌ ಆಫ್‌ ಮರ್ಲಿನ್‌ ಪ್ರಶಸ್ತಿ

ಜಾದೂ ಸಾಮ್ರಾಟ ಪ್ರೊ.ಶಂಕರ್‌ಗೆ ಆರ್ಡರ್‌ ಆಫ್‌ ಮರ್ಲಿನ್‌ ಪ್ರಶಸ್ತಿ
ಕ್ಲೀವ್‌ಲ್ಯಾಂಡ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ

ಮಣಿಪಾಲ : ಇಂದ್ರಜಾಲ ಜಗತ್ತಿನ ಪ್ರಸಿದ್ಧ ಜಾದೂಗಾರ ಪ್ರೊ. ಶಂಕರ್‌ ಅವರು ಅಮೆರಿಕಾದ ಇಂಟರ್‌ನ್ಯಾಷನಲ್‌ ಬ್ರದರ್‌ಹುಡ್‌ ಆಫ್‌ ಮೆಜೀಷಿಯನ್ಸ್‌ ಸಂಸ್ಥೆಯ ಪ್ರತಿಷ್ಠಿತ ಆರ್ಡರ್‌ ಆಫ್‌ ಮರ್ಲಿನ್‌ ಅವಾರ್ಡ್‌ ಗೆ ಆಯ್ಕೆಯಾಗಿದ್ದಾರೆ.

ವಿಸ್ಮಯ ಜಾದೂ ಲೋಕದಿಂದ ಜಗತ್ತಿನೆಲ್ಲೆಡೆ ಹೆಸರು ಗಳಿಸಿರುವ ಪ್ರೊ. ಶಂಕರ್‌ ಅವರು ತಮ್ಮ ಕೈ ಚಳಕದಿಂದ ಎಲ್ಲರನ್ನೂ ಬೆರಗು ಮಾಡಿದವರು. 25 ವರ್ಷಗಳಿಂದ ಜಾದೂ ಪ್ರದರ್ಶನ ನಡೆಸುತ್ತಿರುವ ಇವರು ಜಾಗತಿಕ ಜಾದೂ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ 25 ವರ್ಷಗಳ ನಿರಂತರ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತಿದೆ.

ಜೂನ್‌ ತಿಂಗಳಿನಲ್ಲಿ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಪೊ. ಶಂಕರ್‌ ಅವರನ್ನು ಅಂತರರಾಷ್ಟ್ರೀಯ ಬ್ರದರ್‌ಹುಡ್‌ ಸಂಸ್ಥೆಯ ಅಧ್ಯಕ್ಷರು ಆಹ್ವಾನಿಸಿದ್ದಾರೆ. ಪ್ರೊ. ಶಂಕರ್‌ ಅವರ ಸಾಧನೆಯ ಕಿರೀಟಕ್ಕೆ ಮತ್ತೂ ಹೆಚ್ಚಿನ ಕೀರ್ತಿಯ ಗರಿಗಳು ಸೇರಲಿ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+