ಇನ್ಫೋಸಿಸ್‌ನ ‘ಫಿನಾಕಲ್’ಗೆ ಜಾಗತಿಕ ‘ಬ್ಯಾಂಕರ್ ಟೆಕ್ನಾಲಜಿ ಪ್ರಶಸ್ತಿ’
ಇನ್ಫೋಸಿಸ್‌ನ ‘ಫಿನಾಕಲ್’ಗೆ ಜಾಗತಿಕ ‘ಬ್ಯಾಂಕರ್ ಟೆಕ್ನಾಲಜಿ ಪ್ರಶಸ್ತಿ’
ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಕ್ಕೆ ಸಂದ ಗೌರವ
ಜಾಗತಿಕ ಬ್ಯಾಂಕಿಂಗ್ ಶ್ರೇಷ್ಠ ಸೇವೆಗಳಿಗೆ ಸಲ್ಲುವ 2004ರ ‘ಬ್ಯಾಂಕರ್ ಟೆಕ್ನಾಲಜಿ ಪ್ರಶಸ್ತಿ’ಯು ಮೊಬೈಲ್ ಸಲ್ಯೂಶನ್ ವಿಭಾಗದಲ್ಲಿ ಫಿನಾಕಲ್‌ಗೆ ದೊರೆತಿದೆ ಎಂದು ಜೂನ್ 2ರ ಬುಧವಾರ ಇನ್ಫೋಸಿಸ್ ಪ್ರಕಟಣೆ ತಿಳಿಸಿದೆ. ಫಿನಾಕಲ್‌ನ ಕಾರ್ಪೊರೇಟ್ ಇ-ಬ್ಯಾಂಕಿಂಗ್ ಸೇವೆಗಳಿಗೆ ಸಂದ ಮನ್ನಣೆ ಇದಾಗಿದೆ ಎಂದು ಪ್ರಕಟಣೆ ಬಣ್ಣಿಸಿದೆ.
ಇಂಗ್ಲೆಂಡ್‌ನ ಫೈನಾನ್ಷಿಯಲ್ ಟೈಮ್ಸ್ ಕೊಡಮಾಡುವ ಈ ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿಗಳು - ಜಾಗತಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರ ಹಾಗೂ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಸಲ್ಲುತ್ತದೆ ಎಂದು ಪ್ರಕಟಣೆ ತಿಳಿಸಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications