ಬಿಜೆಪಿ ಸಂಸದೀಯಪಕ್ಷದ ನಾಯಕರಾಗಿ ಅಡ್ವಾಣಿ, ಅಧ್ಯಕ್ಷರಾಗಿ ಅಟಲ್
ಬಿಜೆಪಿ ಸಂಸದೀಯಪಕ್ಷದ ನಾಯಕರಾಗಿ ಅಡ್ವಾಣಿ, ಅಧ್ಯಕ್ಷರಾಗಿ ಅಟಲ್
ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಮುನ್ನಡೆಸುವ ಹೊಣೆ ಜಸ್ವಂತ್ ಹೆಗಲಿಗೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಿಜೆಪಿ ಶಾಸಕಾಂಗ ಪಕ್ಷದ ಅಧ್ಯಕ್ಷರಾಗಿ ಹಾಗೂ ಅಡ್ವಾಣಿಯವರು ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ಪಕ್ಷದ ರಾಜ್ಯಸಭಾ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ವೆಂಕಯ್ಯನಾಯ್ಡು ಮಂಗಳವಾರ ಹೇಳಿದರು.
77ರ ಹರೆಯದ ಅಡ್ವಾಣಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಜಸ್ವಂತ್ ಸಿಂಗ್‌ಶಾಸಕಾಂಗ ಪಕ್ಷದ ಉಪನಾಯಕ. ಈ ಎಲ್ಲಾ ಆಯ್ಕೆಗಳು ಅವಿರೋಧವಾಗಿ ನಡೆದವು ಎಂದು ವೆಂಕಯ್ಯ ನಾಯ್ಡು ತಿಳಿಸಿದರು. ಪ್ರತಿಪಕ್ಷಗಳ ನಾಯಕರಾಗಿಯೂ ಅಡ್ವಾಣಿ ಲೋಕಸಭೆಯಲ್ಲಿ ಕಾರ್ಯ ನಿರ್ವಹಿಸುವರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications