ರಾಜ್ಯ ಪ್ರವಾಸೋದ್ಯಮದ ಜನಪ್ರಿಯತೆಗೆ ಬಿಬಿಸಿ ಜಾಹಿರಾತಿಗೆ ಮೊರೆ
ರಾಜ್ಯ ಪ್ರವಾಸೋದ್ಯಮದ ಜನಪ್ರಿಯತೆಗೆ ಬಿಬಿಸಿ ಜಾಹಿರಾತಿಗೆ ಮೊರೆ
‘ಬಿಬಿಸಿ ವರ್ಲ್ಡ್’ ಮೂಲಕ ಜಾಹಿರಾತು ಪ್ರಸಾರ
ದಕ್ಷಿಣ ಏಷ್ಯಾ ಮತ್ತು ಅರೇಬಿಯನ್ ಗಲ್ಫ್ ದೇಶಗಳ ವೀಕ್ಷಕರನ್ನು ಆಕರ್ಷಿಸಲು ‘ಬಿಬಿಸಿ ವರ್ಲ್ಡ್’ ಮೂಲಕ ಜಾಹಿರಾತು ಬಿತ್ತರಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಆಯುಕ್ತ ಮಹೇಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜನ ಜಾಗೃತಿ ಮತ್ತು ಕರ್ನಾಟಕದ ಸ್ಥಿತಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ‘ದಿ ಸ್ಟೇಜ್’ ಎಂಬ ಪ್ರಕೃತಿ ಮತ್ತು ಪರಂಪರೆ, ‘ದಿ ಕಾಸ್ಟ್ ’ ಎಂಬ ವನ್ಯಜೀವ ಸಂಕುಲ ಹಾಗೂ ‘ದಿ ಸ್ಕಿೃಪ್ಟ್ ’ ಎಂಬ ಚಾರಣ ಮತ್ತು ರಜಾದಿನಗಳ ಕುರಿತಾದ ಜಾಹಿರಾತನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರವಾಸಿಗರ ಕನಸನ್ನು ಸಕಾರಗೊಳಿಸಲು ‘ಥಿಯೇಟರ್ ಆಫ್ ಇನ್ಸಿಫಿರೇಶನ್’ ಗೆ ಆಹ್ವಾನಿಸಲಾಗುವುದು. ಎಲ್ಲಾ ರೀತಿಯ ಪ್ರವಾಸಿಗರಿಗೆ ಕರ್ನಾಟಕದಲ್ಲಿ ಅವಕಾಶವಿದೆ. ಚಾರಣ-ಸಾಹಸಿಗಳಿಗೆ, ಪ್ರವಾಸಿಗರಿಗೆ, ಪ್ರಕೃತಿ ಪ್ರೇಮಿಗಳಿಗೆ, ವನ್ಯಜೀವಿ ಆರಾಧಕರಿಗೂ ಪ್ರವಾಸಿ ತಾಣವಿದೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications