ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿ ದಿನಾಂಕ ಜೂ.15ರವರೆಗೆ ವಿಸ್ತರಣೆ

ಪಾಲಿಕೆಯಿಂದ ಆಸ್ತಿ ತೆರಿಗೆ ಪಾವತಿ ದಿನಾಂಕ ಜೂ.15ರವರೆಗೆ ವಿಸ್ತರಣೆ
ನಾಲ್ಕು ವಲಯಗಳ ನಾಗರಿಕ ಸೇವಾ ಕೇಂದ್ರಗಳಲ್ಲಿ ಶುಲ್ಕ ಪಾವತಿಸಬಹುದು

ಬೆಂಗಳೂರು : ಆಸ್ತಿ ತೆರಿಗೆ ಪಾವತಿ ದಿನಾಂಕವನ್ನು ಬೆಂಗಳೂರು ಮಹಾನಗರ ಪಾಲಿಕೆ ಜೂನ್‌ 15ರವರೆಗೆ ವಿಸ್ತರಿಸಿದೆ.

2004-05ರ ಅವಧಿಯ ಆಸ್ತಿ ತೆರಿಗೆ ಶುಲ್ಕವನ್ನು ಕಟ್ಟಲು ದಂಡ ರಹಿತ ದಿನಾಂಕವನ್ನಾಗಿ ಮೇ 30 ನ್ನು ಈ ಮುನ್ನ ಗೊತ್ತು ಪಡಿಸಲಾಗಿತ್ತು . ಆದರೆ, ಸಾರ್ವಜನಿಕ ಹಿತಾಸಕ್ತಿಯ ಮೇರೆಗೆ ಶುಲ್ಕ ಪಾವತಿ ದಿನವನ್ನು ಜೂನ್‌ 15ರವರೆಗೆ ಪಾಲಿಕೆ ವಿಸ್ತರಿಸಿದೆ. ಪಾಲಿಕೆಯ ನಾಲ್ಕು ನಾಗರಿಕ ಸೇವಾ ಕೇಂದ್ರಗಳಲ್ಲಿ ತೆರಿಗೆಯನ್ನು ಪಾವತಿಸಬಹುದು.

ಬೆಳಗ್ಗೆ 9ರಿಂದ ಮಧ್ಯಾಹ್ನ 12 ಹಾಗೂ ಸಂಜೆ 4ರಿಂದ 7ರವರೆಗೆ ಶುಲ್ಕ ಸ್ವೀಕೃತಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ಭಾನುವಾರ ಸೇರಿದಂತೆ ರಜೆ ದಿನಗಳಲ್ಲಿ ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಈ ಕೇಂದ್ರಗಳು ತೆರೆದಿರುತ್ತವೆ.

ಕರ್ನಾಟಕ ಮುನ್ಸಿಪಲ್‌ ಕಾಯ್ದೆಯ ಪ್ರಕಾರ, ಆಸ್ತಿ ಮಾಲೀಕರು ಆರ್ಥಿಕ ವರ್ಷ ಪ್ರಾರಂಭವಾದ ಮೊದಲ 60 ದಿನಗಳೊಳಗೆ ಅರ್ಧ ವಾರ್ಷಿಕ ಶುಲ್ಕವನ್ನು ಕಟ್ಟಬೇಕಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+