ಪಾಕ್ ಭೇಟಿಗೆ ನಿಮಗೆ ಸ್ವಾಗತವು ;ಸೋನಿಯಾಗೆ ಮುಷರ್ರಫ್ ಆಹ್ವಾನ
ಪಾಕ್ ಭೇಟಿಗೆ ನಿಮಗೆ ಸ್ವಾಗತವು ;ಸೋನಿಯಾಗೆ ಮುಷರ್ರಫ್ ಆಹ್ವಾನ
ಚುನಾವಣೆ ಗೆಲುವಿಗಾಗಿ ಕಾಂಗ್ರೆಸ್ ಅಧ್ಯಕ್ಷೆಗೆ ಅಭಿನಂದನೆ
ಸೋನಿಯಾ ಅವರಿಗೆ ದೂರವಾಣಿ ಕರೆ ಮಾಡಿರುವ ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಈ ಆಹ್ವಾನ ನೀಡಿದ್ದಾರೆ. ಉಭಯ ದೇಶಗಳ ನಡುವಣ ಬಾಂಧವ್ಯ ಸುಧಾರಣೆಯ ನಿಟ್ಟಿನಲ್ಲಿ ಸೋನಿಯಾ ಅವರ ಪಾಕಿಸ್ತಾನದ ಭೇಟಿ ಮಹತ್ವದ ಸಂಗತಿಯಾಗಬಲ್ಲದು ಎಂದು ಮುಷರ್ರಫ್ ಆಶಿಸಿದ್ದಾರೆ.
ದೂರವಾಣಿ ಸಂಭಾಷಣೆ ಸಂದರ್ಭದಲ್ಲಿ , ಇತ್ತೀಚಿನ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ಮುಷರ್ರಫ್ ಸೋನಿಯಾ ಅವರನ್ನು ಅಭಿನಂದಿಸಿದರು ಎಂದು ಪಾಕ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ನವತೇಜ್ ಸರ್‌ನ ತಿಳಿಸಿದ್ದಾರೆ.
ಮುಷರ್ರಫ್ ಅವರ ಅಭಿನಂದನೆಗಳಿಗೆ ಧನ್ಯವಾದಗಳನ್ನು ತಿಳಿಸಿರುವ ಸೋನಿಯಾ, ಪಾಕ್‌ನೊಂದಿಗೆ ಸ್ನೇಹಸಂಬಂಧ ಕುರಿತು ವಾಜಪೇಯಿ ಸರ್ಕಾರ ಅನುಸರಿಸಿದ ಕ್ರಮಗಳನ್ನು ಮುಂದುವರಿಸುವುದಾಗಿ ಹೇಳಿದರು ಎಂದು ನವತೇಜ್ ಹೇಳಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications