ಪಿಯು ಫಲಿತಾಂಶದಿಂದ ನಿರಾಶರಾದ ಇಬ್ಬರು ವಿದ್ಯಾರ್ಥಿಗಳಆತ್ಮಹತ್ಯೆ
ಪಿಯು ಫಲಿತಾಂಶದಿಂದ ನಿರಾಶರಾದ ಇಬ್ಬರು ವಿದ್ಯಾರ್ಥಿಗಳಆತ್ಮಹತ್ಯೆ
ಆತ್ಮಹತ್ಯೆಗೆ ಶರಣಾದ ಜರ್ಝರಿತ ಮನಸ್ಸುಗಳು
ಹಾಸನದ ಎವಿಕೆ ಕಾಲೇಜಿನ ವಿದ್ಯಾರ್ಥಿನಿ ಪ್ರೀತಿ ಫಾಲಾಕ್ಷ (18) ನಿರೀಕ್ಷಿಸಿದಷ್ಟು ಅಂಕಗಳು ದೊರೆತಿಲ್ಲವೆಂದು ನೇಣು ಹಾಕಿಕೊಂಡಿದ್ದಾಳೆ. ಶೇ.90ರಷ್ಟು ಅಂಕಗಳನ್ನು ನಿರೀಕ್ಷಿಸಿದ್ದ ಪ್ರೀತಿಗೆ ದೊರೆತದ್ದು ಶೇ.74 ಅಂಕಗಳು ಮಾತ್ರ. ಮುಂದಿನ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗುತ್ತದೆಂದು ಭಾವಿಸಿದ ಪ್ರೀತಿ ಮೇ 22ರ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸರ್ಕಾರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ವಿಜಯ್ (21) ಕೂಡ ಫಲಿತಾಂಶದಿಂದ ನಿರಾಶನಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ಪರೀಕ್ಷೆಯಲ್ಲಿ ನಪಾಸಾಗಿದ್ದ . ವಿಜಯ್ ತಂದೆ ಎಚ್.ಕೆ.ಸಂದೇಶ್ ದಲಿತ ಸಂಘರ್ಷ ಸಮಿತಿ ಮುಖಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications