ಪಿಯುಸಿ ಫಲಿತಾಂಶ : ಶೇ.48.99 ಫಲಿತಾಂಶ, ಮುನ್ನಡೆಯಲ್ಲಿ ಹಳ್ಳಿಗರು
ಪಿಯುಸಿ ಫಲಿತಾಂಶ : ಶೇ.48.99 ಫಲಿತಾಂಶ, ಮುನ್ನಡೆಯಲ್ಲಿ ಹಳ್ಳಿಗರು
ದಟ್ಸ್‌ಕನ್ನಡದಲ್ಲಿ ಭಾನುವಾರ ಬೆಳಗ್ಗೆ ಫಲಿತಾಂಶ ಪ್ರಕಟ
ಒಟ್ಟು 4,26,003 ವಿದ್ಯಾರ್ಥಿಗಳು ಪರೀಕ್ಷೆಗೆ ಕೂತಿದ್ದು , ಇವರಲ್ಲಿ 2,08,710 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದ ಪ್ರಮಾಣ ಶೇ.48.99ರಷ್ಟಿದೆ ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕ ಡಿ.ಎನ್.ನಾಯಕ್ ದಟ್ಸ್‌ಕನ್ನಡ.ಕಾಂಗೆ ಶನಿವಾರ (ಮೇ22) ತಿಳಿಸಿದರು.
ಯಥಾಪ್ರಕಾರ ಹುಡುಗಿಯರು ಫಲಿತಾಂಶದಲ್ಲಿ ಹುಡುಗರನು ಹಿಂದೂಡಿದ್ದಾರೆ. ಶೇ.56.85ರಷ್ಟು ಹುಡುಗಿಯರು ಉತ್ತೀರ್ಣರಾಗಿದ್ದರೆ, ಹುಡುಗರ ಯಶಸ್ಸು ಶೇ.43.49 ಮಾತ್ರ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳನ್ನು ಹಿಂದೂಡಿರುವುದು ಫಲಿತಾಂಶದ ವಿಶೇಷ. ಶೇ.50.57ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಶೇ.48.52 ನಗರ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಗ್ರಾಮೀಣ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದರು.
ದಟ್ಸ್‌ಕನ್ನಡದಲ್ಲಿ ಫಲಿತಾಂಶ
ರಾಜ್ಯದ ಎಲ್ಲ ಕಾಲೇಜುಗಳಲ್ಲಿ ಪಿಯುಸಿ ಫಲಿತಾಂಶ ಮೇ 23ರ ಭಾನುವಾರ ಸಂಜೆ 4 ಗಂಟೆಗೆ ಪ್ರಕಟವಾಗಲಿದೆ. ಆದರೆ ಇಂಟರ್ನೆಟ್‌ನಲ್ಲಿ ಭಾನುವಾರ ಬೆಳಗ್ಗೆಯೇ ಫಲಿತಾಂಶ ಲಭ್ಯ. ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಅತ್ಯಂತ ಸಮರ್ಪಕವಾಗಿ ಪ್ರಕಟಸಿದ್ದ http://www.thatskannada.com ಪಿಯುಸಿ ಫಲಿತಾಂಶವನ್ನೂ ಪ್ರಕಟಿಸಲಿದೆ. ದಟ್ಸ್‌ಕನ್ನಡದ ಸೋದರ ಪೋರ್ಟಲ್ ಹಾಗೂ http://www.karnataka.com ನಲ್ಲೂ ಫಲಿತಾಂಶ ದೊರೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications