ಮನಮೋಹನ್‌ಗೆ ಸ್ವಾಗತ ! ಜೂ.3 ಪಾಕ್‌ನಿಂದ ‘ಘೋರಿ-3’ ಪರೀಕ್ಷೆ
ಮನಮೋಹನ್‌ಗೆ ಸ್ವಾಗತ ! ಜೂ.3 ಪಾಕ್‌ನಿಂದ ‘ಘೋರಿ-3’ ಪರೀಕ್ಷೆ
ಭಾರತಕ್ಕೆ ಆತಂಕ ಉಂಟು ಮಾಡಬಲ್ಲ ಸಾಮರ್ಥ್ಯದ ಘೋರಿ-3 ಕ್ಷಿಪಣಿ
ಜೂನ್ 3ರಂದು ಘೋರಿ-3 ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ನಡೆಸಲಾಗುವುದು. ಕಳೆದ ಮಾರ್ಚ್‌ನಲ್ಲಿ ಉಡಾಯಿಸಲಾಗಿದ್ದ ಷಹೀನ್ ಕ್ಷಿಪಣಿಗೆ ಹೋಲಿಸಿದರೆ ಘೋರಿ-3ರ ಸಾಮರ್ಥ್ಯ ಗಣನೀಯವಾಗಿ ಹೆಚ್ಚಿದೆ. ಷಹೀನ್ ಸಾಮರ್ಥ್ಯ 2000 ಕಿಮೀಗೆ ಸೀಮಿತವಾಗಿತ್ತು .
ಪಾಕಿಸ್ತಾನದ ಪ್ರಮುಖ ಅಣ್ವಸ್ತ್ರ ಕೇಂದ್ರವಾದ ಖಾನ್ ರಿಸರ್ಚ್ ಲ್ಯಾಬೊರೆಟರಿಗೆ ಭೇಟಿ ನೀಡಿರುವ ಪಾಕ್ ಪ್ರಧಾನಿ ಮಿರ್ ಝಪಾರುಲ್ಲಾ ಖಾಲ್ ಜಮಾಲಿ, ಕ್ಷಿಪಣಿ ಉಡಾವಣೆಯ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜೂನ್ 3ರಂದು ಘೋರಿ-3 ಕ್ಷಿಪಣಿ ಉಡಾಯಿಸುವ ವಿಷಯವನ್ನು ಪಾಕಿಸ್ತಾನದ ಅಧಿಕೃತ ಮೂಲಗಳು ಖಚಿತಪಡಿಸಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications