ಸೋನಿಯಾ ಪೌರತ್ವವನ್ನು ಕಲಾಂ ಪ್ರಶ್ನಿಸಿಲ್ಲ : ರಾಷ್ಟ್ರಪತಿ ಭವನ ಸ್ಪಷ್ಟನೆ
ಸೋನಿಯಾ ಪೌರತ್ವವನ್ನು ಕಲಾಂ ಪ್ರಶ್ನಿಸಿಲ್ಲ : ರಾಷ್ಟ್ರಪತಿ ಭವನ ಸ್ಪಷ್ಟನೆ
ಅವರಿಬ್ಬರ ಮಾತುಕತೆ ಸಂದರ್ಭದಲ್ಲಿ ವಿದೇಶಿ ಮೂಲ ಪ್ರಸ್ತಾಪವಾಗಿಲ್ಲ
ಸೋನಿಯಾ ಗಾಂಧಿ ರಾಷ್ಟ್ರಪತಿಯನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅವರು ಪೌರತ್ವದ ಕುರಿತು ಪ್ರಶ್ನಿಸಿದ್ದಾರೆ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಪೌರತ್ವದ ಕುರಿತಾದ ಯಾವುದೇ ವಿಷಯಗಳು ಮಾತುಕತೆಯ ಸಂದರ್ಭದಲ್ಲಿ ಚರ್ಚೆಗೆ ಬರಲಿಲ್ಲ ಎಂದು ರಾಷ್ಟ್ರಪತಿ ಪತ್ರಿಕಾ ಕಾರ್ಯದರ್ಶಿ ಎಸ್.ಎಂ.ಖಾನ್ ಹೇಳಿದ್ದಾರೆ.
ಕಾಂಗ್ರೆಸ್‌ಮೈತ್ರಿಕೂಟಕ್ಕೆ ಚುನಾವಣೆಯಲ್ಲಿ ಬಹುಮತ ಖಾತರಿಯಾದಾಗ ರಾಷ್ಟ್ರಪತಿ ಸೋನಿಯಾಗಾಂಧಿಯನ್ನು ಮಾತುಕತೆಗಾಗಿ ಆಹ್ವಾನಿಸಿದ್ದರು. ಪೌರತ್ವದ ಕುರಿತು ಭಿನ್ನಾಭಿಪ್ರಾಯ ಇರುತ್ತಿದ್ದರೆ ಅವರು ಮಾತುಕತೆಗೆ ಆಹ್ವಾನ ನೀಡುತ್ತಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಸೋನಿಯಾ ಗಾಂಧಿ ಕಾಂಗ್ರೆಸ್‌ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಗೊಂಡಿರುವುದನ್ನು ರಾಷ್ಟ್ರಪತಿಯವರು ಉಲ್ಲೇಖಿಸಿದ್ದಾರೆ ಎಂದು ರಾಷ್ಟ್ರಪತಿ ಭವನದ ಮೇ.17ರಂದು ಹೊರಡಿಸಿದ್ದ ವರದಿಯಲ್ಲಿ ತಿಳಿಸಲಾಗಿತ್ತು.
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications