ಸಿಇಟಿ-04 ಪರೀಕ್ಷೆ ಆರಂಭ ; ಬೆಂಗಳೂರಲ್ಲಿ 47,600 ವಿದ್ಯಾರ್ಥಿಗಳು
ಸಿಇಟಿ-04 ಪರೀಕ್ಷೆ ಆರಂಭ ; ಬೆಂಗಳೂರಲ್ಲಿ 47,600 ವಿದ್ಯಾರ್ಥಿಗಳು
ರಾಜ್ಯದ 208 ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವ 1.12 ಲಕ್ಷ ಕನಸಿಗರು
ಈ ಬಾರಿ ಒಟ್ಟು 1.12 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯುತ್ತಿದ್ದು , ಬೆಂಗಳೂರು ನಗರವೊಂದರಲ್ಲೇ 47,600 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಒಟ್ಟು 30 ಸಾವಿರ ಹೊರರಾಜ್ಯದ ವಿದ್ಯಾರ್ಥಿಗಳು ರಾಜ್ಯದಲ್ಲಿ ಸಿಇಟಿ ಪರೀಕ್ಷೆ ತೆಗೆದುಕೊಂಡಿದ್ದು , ಇವರಲ್ಲಿ 23 ಸಾವಿರ ಮಂದಿ ಬೆಂಗಳೂರಲ್ಲಿ ಪರೀಕ್ಷೆ ಬರೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 80 ಪರೀಕ್ಷಾ ಕೇಂದ್ರಗಳಿವೆ ಎಂದು ಸಿಇಟಿ ಸೆಲ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಯಾವ ತೊಂದರೆಯೂ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಡಿಜಿಪಿ ಟಿ.ಮಡಿಯಾಳ್ ಹಾಗೂ ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಎಸ್.ಮರಿಸ್ವಾಮಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications