ಖಾಸಗಿ-ಸರ್ಕಾರಿ ಬಸ್ಸು ಢಿಕ್ಕಿ: ಸವದತ್ತಿಗೆ ಹೋಗುತ್ತಿದ್ದ ನಾಲ್ವರ ಮರಣ
ಖಾಸಗಿ-ಸರ್ಕಾರಿ ಬಸ್ಸು ಢಿಕ್ಕಿ: ಸವದತ್ತಿಗೆ ಹೋಗುತ್ತಿದ್ದ ನಾಲ್ವರ ಮರಣ
ಸಾವಿಗೀಡಾದವರಲ್ಲಿ ಇಬ್ಬರು ಮಹಿಳೆಯರು
ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ಸೋಮವಾರ (ಮೇ 17) ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ. ಸಾವಿಗೀಡಾದ ನಾಲ್ಕೂ ಮಂದಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ರಸ್ತೆ ಸಾರಿಗೆ ಸಂಸ್ಥೆ ಬಸ್ಸು ಬೆಳಗಾವಿಯಿಂದ ಸವದತ್ತಿಗೆ ಪ್ರಯಾಣಿಸುತ್ತಿತ್ತು . ಖಾಸಗಿ ಬಸ್ ಗೋಕಾಕ್‌ಗೆ ತೆರಳುತ್ತಿತ್ತು . ಸಾವಿಗೀಡಾದ ನಾಲ್ವರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications