ಪ್ರಧಾನಿ ಪದಕ್ಕೆ ಒಂದೇ ಹೆಜ್ಜೆ ; ‘ಸಿಪಿಪಿ’ ನಾಯಕಿಯಾಗಿ ಸೋನಿಯಾ
ಪ್ರಧಾನಿ ಪದಕ್ಕೆ ಒಂದೇ ಹೆಜ್ಜೆ ; ‘ಸಿಪಿಪಿ’ ನಾಯಕಿಯಾಗಿ ಸೋನಿಯಾ
ಸೋನಿಯಾ ಪ್ರಧಾನಿಯಾಗಲು ಬಹುತೇಕ ಮಿತ್ರಪಕ್ಷಗಳ ಹಸಿರು ನಿಶಾನೆ
ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರಣಬ್ ಮುಖರ್ಜಿ ಸೋನಿಯಾ ಅವರ ಹೆಸರನ್ನು ಸಂಸದೀಯ ಪಕ್ಷದ ನಾಯಕತ್ವದ ಸ್ಥಾನಕ್ಕೆ ಸೂಚಿಸಿದರು. ಈ ಸೂಚನೆಯನ್ನು ಕೇಂದ್ರದ ಮಾಜಿ ವಿತ್ತ ಸಚಿವ ಮನಮೋಹನ್ ಸಿಂಗ್ ಅನುಮೋದಿಸಿದರು. ಸೋನಿಯಾ ಅವರ ಆಯ್ಕೆಯನ್ನು ನೂತನ ಸಂಸದರು ಹರ್ಷೋದ್ಘಾರದಿಂದ ಸ್ವಾಗತಿಸಿದರು.
ಸಂಸದೀಯ ಪಕ್ಷದ ನಾಯಕಿಯಾಗಿ ಆಯ್ಕೆ ನಡೆದ ಸಂದರ್ಭದಲ್ಲಿ ಸೋನಿಯಾಗಾಂಧಿ ಸಭೆಯಲ್ಲಿ ಹಾಜರಿರಲಿಲ್ಲ . ತಡವಾಗಿ ಬಂದ ಸೋನಿಯಾ ಅವರನ್ನು ಚಪ್ಪಾಳೆ ಹಾಗೂ ಜಯಘೋಷದ ಮೂಲಕ ಸಭೆ ಸ್ವಾಗತಿಸಿತು. ಇತ್ತೀಚೆಗೆ ಗಾಯಗೊಂಡು ಆಸ್ಪತ್ರೆ ಸೇರಿದ್ದ ಛತ್ತೀಸ್‌ಗಢದ ಅಜಿತ್‌ಜೋಗಿ ಆಸ್ಪತ್ರೆಯಿಂದ ಸಭೆಗೆ ಗಾಲಿಕುರ್ಚಿಯಲ್ಲಿ ಆಗಮಿಸಿದ ದೃಶ್ಯ ವಿಶೇಷವಾಗಿತ್ತು .
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications