ಆಲ್‌ಖೈದಾ ಹಿಡಿತಕ್ಕೆ ಸಿಗದ ಏಷ್ಯಾದ ಏಕೈಕ ರಾಷ್ಟ್ರ ಈಗ ಏಡ್ಸ್‌ಪೀಡಿತ
ಆಲ್‌ಖೈದಾ ಹಿಡಿತಕ್ಕೆ ಸಿಗದ ಏಷ್ಯಾದ ಏಕೈಕ ರಾಷ್ಟ್ರ ಈಗ ಏಡ್ಸ್‌ಪೀಡಿತ
ಅಮೇರಿಕಾದ ಆರೋಗ್ಯ ಇಲಾಖೆ ಮತ್ತು ಸಿಐಎ ಹೇಳಿಕೆ
ಭಾರತವು ಏಡ್ಸ್ ಬಾಂಬ್‌ಗೆ ನಾಶವಾಗುವ ಮುನ್ನವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಭಾರತದ ಮಿಲಿಟರಿ ಮತ್ತು ಆರ್ಥಿಕ ಪರಿಸ್ಥಿತಿ ಹದಗೆಡಲಿದೆ ಎಂದು ಅಮೆರಿಕಾದ ಈ ಎರಡು ಸಂಸ್ಥೆಗಳು ಹೇಳಿವೆ. ಏಡ್ಸ್ ವಿರುದ್ಧ ಕಾರ್ಯ ನಿರ್ವಹಿಸಬೇಕಾಗಿದೆ. ಸಮಯ ಮೀರಿದ ಬಳಿಕ ಚಿಂತಿಸಿ ಫಲವಿಲ್ಲ ಎಂದು ಅವು ಎಚ್ಚರಿಕೆ ನೀಡಿವೆ.
ಅತಿ ಹೆಚ್ಚಿನ ಏಡ್ಸ್‌ಪೀಡಿತ ರಾಷ್ಟ್ರ ಈಗ ಆಫ್ರಿಕಾದಲ್ಲಿ ಇಲ್ಲ . ಅದು ಈಗ ಏಷ್ಯಾದಲ್ಲಿ ಇದೆ. ಆಲ್-ಖೈದಾದಿಂದ ಪೀಡಿತವಾಗದ ಏಷ್ಯಾದ ಏಕೈಕ ರಾಷ್ಟ್ರವದು. ಅದು ಭಾರತ ಎಂದು ಆರೋಗ್ಯ ಇಲಾಖೆ ಹಾಗೂ ಸಿಐಎ ಖೇದ ವ್ಯಕ್ತಪಡಿಸಿವೆ.
ಭಾರತವು ಏಡ್ಸ್ ದಮನ ಮಾಡದಿದ್ದಲ್ಲಿ, ಅದು ಅಮೇರಿಕಾದ ಮೇಲೆ ಪರಿಣಾಮ ಬೀರಲಿದೆ. ಭಾರತ ನಮ್ಮ ಆಪ್ತ ರಾಷ್ಟ್ರ. ನಮಗೆ ಅವರ ಜೊತೆ ಆರ್ಥಿಕ ಹಾಗೂ ಇನ್ನಿತರ ಸಂಬಂಧವಿದೆ ಎಂದು ಅಮೇರಿಕಾದ ಖಾಸಗಿ ಸುದ್ದಿವಾಹಿನಿಗೆ ನೀಡಿದ ಕಾರ್ಯಕ್ರಮದಲ್ಲಿ ಹೇಳಿಕೊಂಡಿವೆ.
ಏಡ್ಸ್ ವೈರಸ್‌ಗಳು ಇನ್ನುಮುಂದೆ ಒಬ್ಬರಿಂದ ಒಬ್ಬರ ಮೂಲಕ ವಿಶ್ವದಾದ್ಯಂತ ಪಸರಿಸಬಹುದು. ಭಾರತದಲ್ಲಿ ವೇಶ್ಯೆಯರು ಅತಿ ಹೆಚ್ಚು ಏಡ್ಸ್ ಪೀಡಿತರಾಗಿದ್ದಾರೆ ಎಂದು ಹೇಳಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications