ದುಬೈ : ಹುಟ್ಟುಡುಗೆಯಲ್ಲಿ ಸಿಕ್ಕಿಬಿದ್ದ ಚೋರ ಕೃಷ್ಣ ಜನ್ಮಸ್ಥಾನ ತಲುಪಿದ

ದುಬೈ : ಹುಟ್ಟುಡುಗೆಯಲ್ಲಿ ಸಿಕ್ಕಿಬಿದ್ದ ಚೋರ ಕೃಷ್ಣ ಜನ್ಮಸ್ಥಾನ ತಲುಪಿದ
ಅಶ್ಲೀಲ ಚಿತ್ರ ಚಿತ್ರಿಸಲು ಕ್ಯಾಮರವನ್ನೇ ಕದ್ದ

ದುಬೈ : ಕಳ್ಳತನ ಮಾಡಿ ಬೆತ್ತಲೆಯಾಗಿ ತಪ್ಪಿಸಿಕೊಳ್ಳುತ್ತಿದ್ದ ಭಾರತೀಯ ಮೂಲದ ಚೋರನಿಗೆ ದುಬೈ ಸರಕಾರವು ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಈ ಚೋರನು ಡಿಜಿಟಲ್‌ ವಿಡಿಯೋ, ವಿಡಿಯೋ ಕೆಮರಾ, ಮೊಬೈಲ್‌ ಫೋನ್‌, ಚಿನ್ನಾಭರಣ, 20,000 ದಿರ್ಹಾಮ್‌ ನಗದು ಕಳ್ಳತನ ಮಾಡಿದ್ದಾನೆ. ಕಳೆದ ಅಕ್ಟೋಬರ ತಿಂಗಳಲ್ಲಿ ಕಳ್ಳತನ ಮಾಡಿ ತಪ್ಪಿಸಿಕೊಳ್ಳಲು ಕಂಪೌಂಡ್‌ ಗೋಡೆ ಹಾರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆಗ ಆತನ ಬೆನ್ನಲ್ಲಿ ಒಂದು ಚೀಲ ಮತ್ತು ಕಾಲಿಗೆ ಎರಡು ಶೂಗಳು ಬಿಟ್ಟರೆ ದೇಹದಲ್ಲಿ ಬೇರೇನೂ ಇರಲಿಲ್ಲ ಎಂದು ಗಲ್ಫ್‌ ನ್ಯೂಸ್‌ ಪತ್ರಿಕೆ ವರದಿ ಮಾಡಿದೆ.

ಅಶ್ಲೀಲ ಭಂಗಿಗಳ ಚಿತ್ರವನ್ನು ಚಿತ್ರೀಕರಿಸಲು ಕ್ಯಾಮರಾವನ್ನು ಕದ್ದಿರುವುದಾಗಿ ತನ್ನ ತಪ್ಪೊಪ್ಪಿಗೆಯಲ್ಲಿ ಚೋರ ಶಿಖಾಮಣಿ ತಿಳಿಸಿದ್ದಾನೆ. ಒಂದು ವರ್ಷದ ಶಿಕ್ಷೆಯ ಬಳಿಕ ಆತನನ್ನು ಗಡಿಪಾರು ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಶಿಕ್ಷೆಗೊಳಗಾಗಿರುವ ವ್ಯಕ್ತಿ ದುಬೈನ ಹೋಟೆಲ್‌ ಒಂದರಲ್ಲಿ 20ರ ಹರೆಯದ ಉಜ್ಬೇಕಿಸ್ಥಾನ ಯುವತಿ ಜೊತೆ ಜೀವಿಸುತ್ತಿದ್ದ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+