ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಚಂದ್ರಯಾನ-1’ ಯೋಜನೆಗೆ ಕೈ ಜೋಡಿಸಲು 20 ದೇಶಗಳ ಪೋಟಿ

By Staff
|
Google Oneindia Kannada News

‘ಚಂದ್ರಯಾನ-1’ ಯೋಜನೆಗೆ ಕೈ ಜೋಡಿಸಲು 20 ದೇಶಗಳ ಪೋಟಿ
ಇಸ್ರೋ ಯೋಜನೆಯಲ್ಲಿ ಭಾಗಿಯಾಗಲು ಅಮೇರಿಕಾ, ಕೆನಡಾ, ಯುರೋಪ್‌ ದೇಶಗಳ ತಹತಹಿಕೆ

ಬೆಂಗಳೂರು: ‘ಚಂದ್ರಯಾನ-1’ ಯೋಜನೆಯಲ್ಲಿ ಭಾರತದೊಂದಿಗೆ ಭಾಗಿಯಾಗಲು ಅಮೇರಿಕಾ, ಯುರೋಪ್‌ ರಾಷ್ಟ್ರಗಳು ಸೇರಿದಂತೆ ವಿಶ್ವದ 20ಕ್ಕಿಂತಲೂ ಹೆಚ್ಚು ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳು ಮುಂದೆಬಂದಿವೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತಿಳಿಸಿದೆ.

ಭಾರತವು ಚಂದ್ರನಲ್ಲಿಗೆ 2007ರಲ್ಲಿ ಪ್ರಯಾಣ ಮಾಡುವ ‘ಚಂದ್ರಯಾನ-1’ ಯೋಜನೆಯನ್ನು ರೂಪಿಸಿದೆ.

ಅಮೇರಿಕಾ, ಯುರೋಪ್‌ ಮತ್ತು ಕೆನಡಾ ಅಲ್ಲದೇ ಯುರೋಪಿನ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) , ಫ್ರಾನ್ಸ್‌ ದೇಶದ ಸಿಎನ್‌ಇಎಸ್‌, ಜರ್ಮನಿಯ ಡಿಎಲ್‌ಆರ್‌, ಇಸ್ರೇಲ್‌ ಸೇರಿದಂತೆ ಪ್ರಮುಖ ದೇಶಗಳು ಮುಂದಾಗಿವೆ ಎಂದು ಇಸ್ರೋ ಅಧ್ಯಕ್ಷ ಜಿ. ಮಾಧವನ್‌ ಹೇಳಿದರು. ಅವರು ‘ಚಂದ್ರಯಾನ-1’ ಕಾರ್ಯತಂತ್ರದ ರೂಪರೇಷೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಈಗ 20 ಆಹ್ವಾನಗಳು ನಮ್ಮ ಕೈಯಲ್ಲಿವೆ. ಆದರೆ ನಾವು ಎರಡನ್ನು ಮಾತ್ರ ಬಳಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಒಂದು ವೈಜ್ಞಾನಿಕ ಸಮಿತಿ ರಚಿಸಿದ್ದೇವೆ. ಅವರು ಪರಾಮರ್ಶೆ ನಡೆಸಿ ಎರಡು ಸಂಸ್ಥೆಗಳನ್ನು ಆರಿಸಲಿದ್ದಾರೆ ಎಂದು ಹೇಳಿದರು.

ಆಯ್ದ ಎರಡು ವಿದೇಶಿ ಸಂಸ್ಥೆಗಳು 2007ಕ್ಕೆ ಉದ್ದೇಶಿಸಲಾಗಿರುವ ಈ ಯೋಜನೆಯ ಹೆಚ್ಚುವರಿ ಪ್ರಯೋಗಗಳನ್ನು ನಡೆಸಲಿವೆ.

ಸದ್ಯಕ್ಕೆ ನಾವು ಮಾನವ ರಹಿತ ಚಂದ್ರಯಾನವನ್ನು ರೂಸಿಸುತ್ತಿದ್ದೇವೆ. ಮಾನವನನ್ನು ಕಳುಹಿಸುವ ಯೋಜನೆಯನ್ನು ಮುಂದೆ ಯೋಜಿಸಲಾಗುವುದು . ಈಗಾಗಲೇ ಪೂರ್ವ ಸಿದ್ಧತೆಯನ್ನು ಆರಂಭಿಸಿದ್ದೇವೆ ಎಂದು 350 ಕೋಟಿ ರೂಪಾಯಿಯ ಈ ಯೋಜನೆಯ ಪೂರ್ವತಯಾರಿ ಕುರಿತು ಹೇಳಿದರು.

ಮಾನವನನ್ನು ಕಳುಹಿಸುವ ಕುರಿತು ವಿವಿಧ ವೇದಿಕೆಗಳಲ್ಲಿ ಅನೇಕ ವೈಜ್ಞಾನಿಕ ಚರ್ಚೆಗಳು ಆಗಿವೆ. ಅದು ವಿಮರ್ಶಾತ್ಮಕವಾಗಿ ಸಾಗಲಿ ಎಂದು ಮಾಧವನ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X