ವಾಜಪೇಯಿ ಲಕ್ನೋ ಕ್ಷೇತ್ರದಲ್ಲಿ 501 ವರ್ಷದ ಮತದಾರ ಮುತ್ತಜ್ಜಿ
ವಾಜಪೇಯಿ ಲಕ್ನೋ ಕ್ಷೇತ್ರದಲ್ಲಿ 501 ವರ್ಷದ ಮತದಾರ ಮುತ್ತಜ್ಜಿ
ಶತಕ, ದ್ವಿಶತಕ ವೀರರಿಗಿಲ್ಲಿ ಕೊರತೆಯೇ ಇಲ್ಲ !
ಲಕ್ನೋದ ಕಂಟೋನ್‌ಮೆಂಟ್ ನಿವಾಸಿ ಚೋಟೇಲಾಲ್‌ರ ಪತ್ನಿ ಸಾವಿತ್ರಿ ದ್ವಿವೇದಿ ಅವರಿಗೆ ಚುನಾವಣಾ ಪಟ್ಟಿಯ ಪ್ರಕಾರ ವಿಶ್ವದ ಅತಿ ಹಿರಿಯ ಮತದಾರ ಎನ್ನುವ ಕೀರ್ತಿ ಸಲ್ಲುತ್ತದೆ. ಆಕೆಯ ವಯಸ್ಸೆಷ್ಟು ಗೊತ್ತೇ ? ಕೇವಲ 501 ವರ್ಷಗಳು !
ಪಟ್ಟಿಯಂತೆ ಈಕೆಯ ಜನನ 1503ನೇ ಇಸವಿ ಎಂದಾಗುತ್ತದೆ. ವಾಸ್ಕೋಡಗಾಮನಿಂದ ಹಿಡಿದು ವಾಜಪೇಯಿ ತನಕ ಭಾರತದ ಇತಿಹಾಸಕ್ಕೆ ಆಕೆ ಸಾಕ್ಷಿಯಾಗಬಹುದು. ಸಾವಿತ್ರಿ ಮೇಡಂ ಮಾತ್ರವಲ್ಲ - ಲಕ್ನೋ ಕ್ಷೇತ್ರದಲ್ಲಿ ಶತಕ, ದ್ವಿಶತಕ ಬಾರಿಸಿದವರು ಇನ್ನೂ ಹಲವರಿದ್ದಾರೆ. ಅದೃಷ್ಟಕ್ಕೆ ಕ್ರಿಸ್ತಪೂರ್ವದ ಕಾಲದವರು ಯಾರೂ ಇಲ್ಲ .
ರಾಧಾ ಎಂಬ ಮಹಿಳೆಗೆ 203 ವರ್ಷ, ಮುನೀಬ್‌ಳ ವಯಸ್ಸು 225 ವರ್ಷ, ಹನೀಬ್‌ಗೆ 181 ವರ್ಷ. ಆದರೆ ವಿಪರ್ಯಾಸ ನೋಡಿ ; ಈ ಸೆಂಚುರಿ ವೀರರಿಗೆ ಮತ ಚಲಾಯಿಸಲು ಅವಕಾಶ ನಿರಾಕರಿಸಲಾಗಿದೆ. ಕಾರಣ, ಮತಪಟ್ಟಿಯಲ್ಲಿನ ವಯಸ್ಸಿಗೂ ಅವರ ಶರೀರದ ಚಹರೆಗಳಿಗೂ ತಾಳೆಯಾಗುತ್ತಿರಲಿಲ್ಲ .
ಪಟ್ಟಿಯ ಆವಾಂತರಗಳು ಇಷ್ಟಕ್ಕೇ ಮುಗಿಯುವುದಿಲ್ಲ . ನೀಲಕಾಂತ ತಿವಾರಿ ಎಂಬ ಗಟ್ಟಿಮುಟ್ಟಾದ ಗಂಡಸು ಮತದಾನಕ್ಕೆ ಬಂದಾಗಲೇ ಆತನಿಗೆ ಅರಿವಾದದ್ದು, ತಾನು ಹೆಣ್ಣು ಎಂಬುದು! ಪಟ್ಟಿಯಲ್ಲಿ ಆತ ನೀಲಮ್ಮನಾಗಿದ್ದ. ಎಷ್ಟೇ ಅಲವತ್ತು ಕೊಂಡರೂ ಚುನಾವಣಾಧಿಕಾರಿ ಆತನನ್ನು ನೀಲಮ್ಮ ಎಂದು ಒಪ್ಪಿಕೊಳ್ಳಲಿಲ್ಲವಂತೆ. ಆತನ ಜೊತೆಯಿದ್ದ ರಾಜಣ್ಣ ಮತ್ತಿತರರ ಪಾಡು ಅದೇ. ಅವರು ಪತ್ನಿ ಸಮೇತ ಮತದಾನಕ್ಕೆ ಆಗಮಿಸಿದ್ದರು. ಪಾಪ! ಲಿಂಗ ಬದಲಾದುದರಿಂದ ಮತದಾನ ಕಳೆದುಕೊಂಡರು.
ಜಗತ್ತಿನ ಘನತೆವೆತ್ತ ಪ್ರಜಾಪ್ರಭುತ್ವ ಧನ್ಯ ಧನ್ಯ!
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications