ಬಾಬಿ ಫಿಶರ್‌ ದಾಖಲೆ ಸರಿಗಟ್ಟಿದ ಆನಂದ್‌ಗೆ 3 ನೇ ಚೆಸ್‌ಆಸ್ಕರ್‌ ಗರಿ

ಬಾಬಿ ಫಿಶರ್‌ ದಾಖಲೆ ಸರಿಗಟ್ಟಿದ ಆನಂದ್‌ಗೆ 3 ನೇ ಚೆಸ್‌ಆಸ್ಕರ್‌ ಗರಿ
ಜುಲೈ ತಿಂಗಳಲ್ಲಿ ಮಾಸ್ಕೋದಲ್ಲಿ ಪ್ರಶಸ್ತಿ ಪ್ರದಾನ

ಮಾಸ್ಕೋ: ವಿಶ್ವದ ನಂಬರ್‌ ಎರಡನೇ ಚದುರಂಗ ಆಟಗಾರ ಭಾರತದ ವಿಶ್ವನಾಥನ್‌ ಆನಂದ್‌ ಮೂರನೇ ಬಾರಿಗೆ ಚೆಸ್‌ ಆಸ್ಕರ್‌ ಜಯಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಜುಲೈ ತಿಂಗಳಲ್ಲಿ ಮಾಸ್ಕೋದಲ್ಲಿ ಜರುಗಲಿದೆ.

ವಿಶ್ವದ 50 ಕ್ಕೂ ಹೆಚ್ಚಿನ ಚೆಸ್‌ಬರಹಗಾರರು, ವಿಮರ್ಶಕರು, ಪತ್ರಕರ್ತರು, ಮಾಜಿ ಆಟಗಾರರು ನೀಡಿದ ಅಂಕದ ಆಧಾರದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಆನಂದ್‌ 4150 ಅಂಕ ಪಡೆದರೆ, ಅವರ ಸಮೀಪ ಸ್ಪರ್ಧಿ ಪೀಟರ್‌ ಸ್ವಿಡ್ಲರ್‌ 2575 ಅಂಕ ಪಡೆದಿದ್ದಾರೆ. ಆನಂದ್‌ ಈ ಹಿಂದೆ 1997 ಮತ್ತು 1998ರಲ್ಲಿ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗಿದ್ದರು.

ಈ ಋತುವಿನ ವಿಶ್ವ ಶ್ರೇಯಾಂಕದಲ್ಲಿನ ಒಂದನೇ ಆಟಗಾರ ಗ್ಯಾರಿ ಕ್ಯಾಸ್ಪರೋವ್‌ ಆಸ್ಕರ್‌ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಗಿದೆ.

ಏಳು ವರ್ಷಗಳಲ್ಲಿ ಮೂರನೇ ಬಾರಿ ಪ್ರಶಸ್ತಿ ಪಡೆದು ಸಂತಸವಾಗಿದೆ. ಬಾಬಿ ಫಿಶರ್‌ ಹೊರತು ಪಡಿಸಿದರೆ ಈ ಗೌರವಕ್ಕೆ ಮೂರು ಬಾರಿ ಪಾತ್ರರಾದ ರಷ್ಯನೇತರ ಎಂಬ ಹೆಮ್ಮೆಯಿದೆ. ಇದರ ಮೂಲಕ ವಿಸ್ವ ಚೆಸ್‌ನಲ್ಲಿ ನನ್ನ ಹೆಸರು ಖಾಯಂ ಆಗಿ ಉಳಿಯಲಿದೆ ಎಂದು ತಿಳಿದುಕೊಂಡಿದ್ದೇನೆ ಎಂದು ಆನಂದ್‌ ಹರ್ಷವ್ಯಕ್ತಪಡಿಸಿದರು.

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+