ಮೇ8ರ ಶನಿವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯಾದ್ಯಂತ ಪ್ರಕಟ
ಮೇ8ರ ಶನಿವಾರ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯಾದ್ಯಂತ ಪ್ರಕಟ
ಇಂಟರ್ನೆಟ್‌ನಲ್ಲಿ ಮೇ 7ರ ಸಂಜೆಯೇ ಫಲಿತಾಂಶ ಲಭ್ಯ
ಮೇ 8ರ ಶನಿವಾರ ಬೆಳಗ್ಗೆ 9 ಗಂಟೆಗೆ ರಾಜ್ಯದ ಎಲ್ಲ ಶಾಲೆಗಳು, ಕಿರಿಯ ಕಾಲೇಜು ಹಾಗೂ ಮಂಡಳಿಯ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಏಕಕಾಲದಲ್ಲಿ ಪ್ರಕಟವಾಗಲಿದೆ. ಆದರೆ ಇಂಟರ್ನೆಟ್‌ನಲ್ಲಿ ಶುಕ್ರವಾರ (ಮೇ 7) ಸಂಜೆಯೇ ಫಲಿತಾಂಶ ಲಭ್ಯವಿರುತ್ತದೆ ಎಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಬುಧವಾರ ಪ್ರಕಟಣೆಯಲ್ಲ ತಿಳಿಸಿದೆ.
ಸಂಬಂಧಿಸಿದ ಶಾಲಾಕಾಲೇಜುಗಳ ವರಿಷ್ಠರು ತಮ್ಮ ಶಾಲೆಗಳ ಫಲಿತಾಂಶವನ್ನು ಮೇ7ರೊಳಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಪಡೆಯಬಹುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications