ನಾಲ್ಕನೇ ಹಂತ: ವಾಜಪೇಯಿ, ಲಾಲೂ, ಮುಲಾಯಂಗೆ ಅಗ್ನಿ ಪರೀಕ್ಷೆ
ನಾಲ್ಕನೇ ಹಂತ: ವಾಜಪೇಯಿ, ಲಾಲೂ, ಮುಲಾಯಂಗೆ ಅಗ್ನಿ ಪರೀಕ್ಷೆ
83 ಕ್ಷೇತ್ರಗಳಲ್ಲಿ ಹಕ್ಕು ಚಲಾಯಿಸಲಿರುವ 10.72 ಕೋಟಿ ಮತದಾರರು
ಉತ್ತರಪ್ರದೇಶದ 30, ರಾಜಸ್ಥಾನದ 25, ಬಿಹಾರದ 13, ಮಧ್ಯಪ್ರದೇಶದ 12 ಮತ್ತು ಅರುಣಾಚಲ ಪ್ರದೇಶ, ಜಮ್ಮುಕಾಶ್ಮೀರ ಹಾಗೂ ನಾಗಲ್ಯಾಂಡ್‌ಗಳ ತಲಾ ಒಂದು ಸ್ಥಾನಕ್ಕೆ ಮತದಾನ ನಡೆದಿದೆ.
ನಾಲ್ಕನೇ ಹಂತದ ಈ ಚುನಾವಣೆಯಲ್ಲಿ ಪ್ರಧಾನಿ ವಾಜಪೇಯಿ(ಲಕ್ನೋ), ಮುರಳಿ ಮನೋಹರ ಜೋಶಿ(ಅಲಹಾಬಾದ್), ಲಾಲೂ ಪ್ರಸಾದ್ ಯಾದವ್(ಛಾಪ್ರಾ), ಮುಲಾಯಂ ಸಿಂಗ್ ಯಾದವ್, ನಟ ಧಮೇಂದ್ರ, ಶರದ್ ಯಾದವ್, ಶಾನವಾಜ್ ಹುಸೇನ್, ದಿಗ್ವಿಜಯ ಸಿಂಗ್ ಮುಂತಾದ ಘಟಾನುಘಟಿಗಳ ರಾಜಕೀಯ ಭವಿಷ್ಯ ನಿರ್ಧಾರವಾಗಲಿದೆ.
ವ್ಯಾಪಕ ಭದ್ರತಾ ಕಾರ್ಯಗಳಿಗಾಗಿ ಸುಮಾರು 90 ಸಾವಿರ ಯೋಧರನ್ನು ನಿಯೋಜಿಸಲಾಗಿದೆ. 19,835 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರ್ತಿಸಲಾಗಿದೆ. ಬಿಹಾರ ಮತ್ತು ಜಮ್ಮು ಕಾಶ್ಮೀರದ ಕೆಲವು ಮತಗಟ್ಟೆಗಳಲ್ಲಿ ದುಷ್ಕರ್ಮಿಗಳು ಕಂಡಲ್ಲಿ ಗುಂಡಿಕ್ಕಲು ಆದೇಶ ನೀಡಲಾಗಿದೆ.
(ಏಜನ್ಸೀಸ್)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications