ಫಲಿತಾಂಶ : ಮೇ 10ರೊಳಗೆ ಎಸ್‌ಎಸ್‌ಎಲ್ಸಿ , ಮಾಸಾಂತ್ಯದಿ ಪಿಯುಸಿ
ಫಲಿತಾಂಶ : ಮೇ 10ರೊಳಗೆ ಎಸ್‌ಎಸ್‌ಎಲ್ಸಿ , ಮಾಸಾಂತ್ಯದಿ ಪಿಯುಸಿ
ಮೇ 18-19ರಂದು ಸಿಇಟಿ ಪರೀಕ್ಷೆ
ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಈಗಾಗಲೇ ಮುಗಿದಿದ್ದು , ಮೌಲ್ಯಮಾಪನೋತ್ತರ ಕಾರ್ಯ ಪ್ರಗತಿಯಲ್ಲಿದೆ. ಮೇ 7 ರಿಂದ 10 ರೊಳಗೆ ಫಲಿತಾಂಶ ಪ್ರಕಟವಾಗುತ್ತದೆ ಎಂದು ಮಂಡಳಿಯ ನಿರ್ದೇಶಕ ಟಿ.ಎನ್.ಕುಮಾರ್ ತಿಳಿಸಿದ್ದಾರೆ. ವಿಧಾನಸಭೆ-ಲೋಕಸಭೆ ಚುನಾವಣಾ ಪ್ರಕ್ರಿಯೆಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕುಮಾರ್ ಹೇಳಿದರು.
ಪಿಯುಸಿ ಫಲಿತಾಂಶ : ಮೇ ತಿಂಗಳ ಕೊನೆಯಲ್ಲಿ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ಪದವಿ ಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ಡಿ.ಎನ್.ನಾಯಕ್ ತಿಳಿಸಿದ್ದಾರೆ. ಮೇ 18 ಮತ್ತು 19ರಂದು ಸಿಇಟಿ ಪರೀಕ್ಷೆಗಳು ನಡೆಯಲಿವೆ. ಆನಂತರವೇ ಪಿಯುಸಿ ಫಲಿತಾಂಶ ಪ್ರಕಟವಾಗಲಿದೆ ಎಂದು ನಾಯಕ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications