ತಂಬಾಕು ನಿಷೇಧ ಕಾನೂನನ್ನು ಸ್ವಾಗತಿಸಿದ ಅತಿ ದೊಡ್ಡ ತಂಬಾಕು ಕಂಪೆನಿ
ತಂಬಾಕು ನಿಷೇಧ ಕಾನೂನನ್ನು ಸ್ವಾಗತಿಸಿದ ಅತಿ ದೊಡ್ಡ ತಂಬಾಕು ಕಂಪೆನಿ
ಮೇ.01ರಿಂದ ತಂಬಾಕು ನಿಷೇಧ ಕಾನೂನು ಜಾರಿ
ನಾವು ಕಾನೂನನ್ನು ಅನುಸರಿಸುತ್ತೇವೆ. ಇದರಲ್ಲಿ ದ್ವಂದ್ವಗಳಿಲ್ಲ . ಜವಾಬ್ದಾರಿಯುತ ಕಂಪೆನಿಯಾಗಿ ನಾವು ಕಾನೂನು ಅಳವಡಿಕೆಗೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ಸಂಸ್ಥೆಯ ಅಧ್ಯಕ್ಷ ವೈ.ಸಿ. ದೇವೆಶ್ವರ್‌ಹೇಳಿದ್ದಾರೆ.
ಮೇ.01ರಿಂದ ಜಾರಿಗೆ ಬರುವ ಈ ಕಾನೂನಿನ ಅನ್ವಯ ತಂಬಾಕು ಪದಾರ್ಥದ ಜಾಹೀರಾತು, ವ್ಯಾಪಾರ-ವಹಿವಾಟು ನಿಯಂತ್ರಣ, ಹಂಚಿಕೆ, ಉತ್ಪಾದನೆ, ಸಾಗಾಟ ವನ್ನು ನಿಷೇಧಿಸಲಾಗಿದೆ.
ಐಟಿಸಿಯು ದೇಶದ ಅತಿದೊಡ್ಡ ತಂಬಾಕು ಪದಾರ್ಥದ ಜಾಹಿರಾತುದಾರರು. ಅಲ್ಲದೇ ಪ್ರಯೋಜಕರು ಆಗಿದ್ದರು. ಮೂರು ವರ್ಷಗಳ ಹಿಂದೆ ನ್ಯಾಯಾಲಯ ಈ ಕುರಿತು ಪ್ರಸ್ತಾಪಿಸಿದಾಗ ಐಟಿಸಿ ತನ್ನ ಬೆಂಬಲ ವ್ಯಕ್ತಪಡಿಸಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications