ಮಂಗಳೂರು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪಾಕ್‌ ಪ್ರಜೆ ಪ್ರತ್ಯಕ್ಷ

ಮಂಗಳೂರು ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಪಾಕ್‌ ಪ್ರಜೆ ಪ್ರತ್ಯಕ್ಷ
ಪತ್ತೆ ಹಚ್ಚಿದ ಕರ್ತವ್ಯ ನಿರತ ಪೊಲೀಸ್‌ ಅಧಿಕಾರಿ ವೆಂಕಟೇಶ್‌ ಪ್ರಸನ್ನ

ಮಂಗಳೂರು : ಮಂಗಳೂರು ಲೋಕಸಭಾ ವ್ಯಾಪ್ತಿಗೆ ಒಳಪಟ್ಟ ಮತಗಟ್ಟೆಯಾಂದರ ಮತದಾರರ ಪಟ್ಟಿಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಹೆಸರು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕಿಸ್ತಾನದ ವೀಸಾ ಹೊಂದಿದ ವ್ಯಕ್ತಿ , ಭಾರತೀಯ ಮಹಮ್ಮದ್‌ ಹುಸೇನ್‌ ಮಿಸ್ಸಾಬನ ಜೊತೆ ಅತ್ತಾವರ ಮತಗಟ್ಟೆಯಲ್ಲಿ ಅಡ್ಡಾಡುತ್ತಿದ್ದರು. ಇದನ್ನು ಕರ್ತವ್ಯ ನಿರತರಾಗಿದ್ದ ಪೊಲೀಸ್‌ ಇನ್ಸ್‌ಪೆಕ್ಟರ್‌ ವೆಂಕಟೇಶ್‌ ಪ್ರಸನ್ನ ಗಮನಿಸಿದರು. ತಕ್ಷಣ ಮತಗಟ್ಟೆ ಅಧಿಕಾರಿಗಳಿಗೆ ‘ಮಿಸ್ಸಾಬಾನ ಪತ್ನಿ ಮೆಹರುನ್ನೀಸ ತನ್ನ ಪಾಕಿಸ್ತಾನಿ ಪಾಸ್‌ಪೋರ್ಟ್‌ ನವೀಕರಿಸುತ್ತಿದ್ದುದನ್ನು ನಾನು ಕಂಡಿದ್ದೇನೆ. ಅವರಿಗೆ ಮತಚಲಾಯಿಸಲು ಅವಕಾಶ ಕೊಡಬೇಡಿ’ ಎಂದು ತಿಳಿಸಿದ್ದಾರೆ.

ಮೆಹರುನ್ನೀಸ ಮತ್ತು ಆಕೆಯ ಪಾಕಿಸ್ತಾನಿ ಸೊಸೆಯ ಹೆಸರು ಮತದಾರರ ಪಟ್ಟಿ ಮತ್ತು ನ್ಯಾಯಬೆಲೆ ಅಂಗಡಿ ಪಟ್ಟಿಯಲ್ಲಿದೆ. ಆದರೆ ಅವರು ಭಾರತೀಯ ಪ್ರಜೆಗಳಾಗಿಲ್ಲ. ಮೆಹರುನ್ನೀಸ ಮಿಸ್ಸಾಬನ ಪತ್ನಿ. ಅವರ ಪುತ್ರ ಸಹ ಪಾಕಿಸ್ತಾನಿ ಪ್ರಜೆಯನ್ನು ವರಿಸಿದ್ದಾನೆ ಎಂದು ಮಂಗಳೂರು ಪೊಲೀಸರು ವಿವರಿಸಿದ್ದಾರೆ.

ಮುಂದಿನ ತನಿಖೆಗಾಗಿ ಕಂದಾಯ ಅಧಿಕಾರಿಗಳಿಗೆ ಈ ವರದಿಯನ್ನು ಪೊಲೀಸ್‌ ಇನ್ಸ್‌ಪೆಕ್ಟರ್‌ ಕಳುಹಿಸಿ ಕೊಟ್ಟಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+