ರಾಜಕಾರಣಿಗಳು 65ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು : ಠಾಕ್ರೆ
ರಾಜಕಾರಣಿಗಳು 65ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಬೇಕು : ಠಾಕ್ರೆ
80 ವರ್ಷದಲ್ಲಿ ಪ್ರಧಾನಿ ಆಗುವ ಬಯಕೆ ವ್ಯಕ್ತಪಡಿಸಿದ ಠಾಕ್ರೆ
‘ವಯಸ್ಸಾದ ರಾಜಕಾರಣಿಗಳ’ ಕುರಿತು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು ನನಗೆ 80 ವರ್ಷದಲ್ಲಿ ಪ್ರಧಾನಿಯಾಗ ಬೇಕೆಂಬ ಬಯಕೆ ಇದೆ. ಆದರೆ ಸಹಜವಾಗಿ ರಾಜಕಾರಣಿಗಳು 65 ವರ್ಷದಲ್ಲಿ ನಿವೃತ್ತಿ ಹೊಂದಬೇಕು ಎಂದು ಅಭಿಪ್ರಾಯಪಟ್ಟರು.
ರಾಜಕಾರಣಿಗಳು 65ವರ್ಷದ ಬಳಿಕ ನಿವೃತ್ತಿ ಕೈಗೊಳ್ಳಬೇಕು. ಅಂತಹ ಪ್ರಜಾಪ್ರಭುತ್ವದ ಕನಸನ್ನು ನಾನು ಕಾಣುತ್ತಿದ್ದೇನೆ ಎಂದು ಹೇಳಿದರು. ಅವರು ಬಾಂದ್ರಾದಲ್ಲಿ ನಡೆದ ಭಾರತೀಯ ಕಾಮ್‌ಗಾರ್ ಸೇನಾದ ವಾರ್ಷಿಕ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನನಗೀಗ 70 ವರ್ಷ ಕಳೆದಿದೆ. ನನಗೆ 80 ವರ್ಷ ತುಂಬುವಾಗ ಪ್ರಧಾನಿಯಾಗು ಬೇಕೆಂಬ ಹಂಬಲದಲ್ಲಿ ಇದ್ದೇನೆ. ಈಗೀಗ 80 ವರ್ಷ ಎಂಬುದು ಪ್ರಧಾನಿ ಪದಕ್ಕೆ ಅರ್ಹತೆಯಾಗಿ ಬಿಟ್ಟಿದೆ ಎಂದು ಲಘುವಾಗಿ ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications