ಸೇನಾ ಗಾತ್ರ ಕಡಿತ, ಬೊಜ್ಜು ಕರಗಿಸಿಕೊಳ್ಳಲು ಪಾಕಿಸ್ತಾನದ ನಿರ್ಧಾರ
ಸೇನಾ ಗಾತ್ರ ಕಡಿತ, ಬೊಜ್ಜು ಕರಗಿಸಿಕೊಳ್ಳಲು ಪಾಕಿಸ್ತಾನದ ನಿರ್ಧಾರ
ಸೇನೆ ಕುಗ್ಗಿಸುವುದರಿಂದ ಮಿಲಿಯನ್‌ಗಟ್ಟಲೆ ಡಾಲರ್ ಉಳಿತಾಯ
ದೇಶದ 57 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸೇನೆಯ ಗಾತ್ರವನ್ನು ಕುಗ್ಗಿಸಲು ಉದ್ದೇಶಿಸಿದ್ದು , 50 ಸಾವಿರ ಟ್ರೂಪ್‌ಗಳ ಸೇನೆಯನ್ನು ಕಡಿತಗೊಳಿಸಲಾಗುವುದು. ಪಾಕಿಸ್ತಾನದ ಅಧ್ಯಕ್ಷ ಮುಷರ್ರಫ್ ನೇತೃತ್ವದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಾಕಿಸ್ತಾನದ ವಕ್ತಾರರೊಬ್ಬರು ಏ.28ರ ಬುಧವಾರ ತಿಳಿಸಿದ್ದಾರೆ.
ಸೇನೆಯನ್ನು ಕುಗ್ಗಿಸುವುದರಿಂದ ಮಿಲಿಯನ್‌ಗಟ್ಟಲೆ ಡಾಲರ್‌ಗಳ ಉಳಿತಾಯ ಸಾಧ್ಯವಾಗುತ್ತದೆ. ಮಿಗಿತದ ಹಣವನ್ನು ಸೇನೆಯನ್ನು ಮೇಲ್ದರ್ಜೆಗೇರಿಸಲು ಹಾಗೂ ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಿಕೊಳ್ಳಬಹುದು ಎಂದು ಬ್ರಿಗೇಡರ್ ಫಯಾಜ್ ಅಹ್ಮದ್ ಸತ್ತಿ ಹೇಳಿದ್ದಾರೆ.
ಪ್ರಸ್ತುತ 5 ಲಕ್ಷದ 50 ಸಾವಿರ ಟ್ರೂಪ್‌ಗಳನ್ನು ಪಾಕಿಸ್ತಾನದ ಸೇನೆ ಒಳಗೊಂಡಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications