ವ್ಯಾಸಂಗ ಸಾಲ : 60% ಅಂಕಪಡೆದ ವಿದ್ಯಾರ್ಥಿಗೆ 2% ಬಡ್ಡಿ ಸಬ್ಸಿಡಿ
ವ್ಯಾಸಂಗ ಸಾಲ : 60% ಅಂಕಪಡೆದ ವಿದ್ಯಾರ್ಥಿಗೆ 2% ಬಡ್ಡಿ ಸಬ್ಸಿಡಿ
ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗರಿಷ್ಠ ನಾಲ್ಕು ಲಕ್ಷ ರೂಪಾಯಿ ಸಾಲ
2004 ಮಾರ್ಚ್ ನಂತರದ ಹೊಸ ಖಾತೆಗಳನ್ನು ಹೊಂದಿರುವವರಿಗೆ ಇದು ಅನ್ವಯಿಸಲಿದೆ. ಗರಿಷ್ಠ ನಾಲ್ಕು ಲಕ್ಷ ರೂಪಾಯಿಗಳ ಸಾಲ ಪಡೆಯಬಹುದಾಗಿದೆ. ಸಾಲ ಪಡೆಯುವ ವಿದ್ಯಾರ್ಥಿಯ ಪಾಲಕರ ವಾರ್ಷಿಕ ಆದಾಯ ರೂ. 2.5 ಲಕ್ಷ ಮೀರಿರಬಾರದು ಎಂದು ಬ್ಯಾಂಕ್ ತಿಳಿಸಿದೆ.
ಸಾಲಕ್ಕೆ ಅರ್ಜಿ ಸಲ್ಲಿಸ ಬಯಸುವ ವಿದ್ಯಾರ್ಥಿಯು ಸಂಬಂಧಪಟ್ಟ ತರಗತಿಯಲ್ಲಿ 60% ಅಂಕ ಗಳಿಸಿರಬೇಕು. ವಿದ್ಯಾರ್ಥಿಯ ವ್ಯಾಸಂಗದ ಅವಧಿಯಲ್ಲಿ ಸಾಲ ನೀಡಲಾಗುವುದು ಮತ್ತು ವ್ಯಾಸಂಗ ಮುಗಿದು 5 ವರ್ಷಗಳ ನಂತರ ತೆಗೆದುಕೊಂಡ ಮೊತ್ತಕ್ಕೆ 2% ರಂತೆ ಬಡ್ಡಿ ಹಾಕಲಾಗುವುದು ಎಂದು ಸಿಂಡಿಕೇಟ್ ಬ್ಯಾಂಕ್ ತಿಳಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications