ಐತಿಹಾಸಿಕ ಏಷ್ಯಾ ಹೆದ್ದಾರಿ ಸಂಪರ್ಕಜಾಲ ಯೋಜನೆಗೆ ಭಾರತದ ಸಹಿ
ಐತಿಹಾಸಿಕ ಏಷ್ಯಾ ಹೆದ್ದಾರಿ ಸಂಪರ್ಕಜಾಲ ಯೋಜನೆಗೆ ಭಾರತದ ಸಹಿ
ಏಷ್ಯಾದ ರಾಜಧಾನಿಗಳು ಹಾಗೂ ಪ್ರಮುಖ ಸ್ಥಳಗಳ ನಡುವೆ ಸಂಪರ್ಕ ಜಾಲ
1 ಲಕ್ಷ 40 ಸಾವಿರ ಕಿ.ಮೀ. ಉದ್ದ ಏಷ್ಯಾದ ಹೆದ್ದಾರಿ ಸಂಪರ್ಕ ಜಾಲ ಯೋಜನೆಯು ಪ್ರಾದೇಶಿಕ ಭಾವೈಕ್ಯತೆ ಹಾಗೂ ಸಹಕಾರ ವೃದ್ಧಿಯ ಉದ್ದೇಶ ಹೊಂದಿದೆ. ಭಾರತ, ಪಾಕಿಸ್ತಾನ, ಚೀನಾ, ಇರಾನ್, ಇಂಡೋನೇಷಿಯಾ, ಜಪಾನ್, ಮಂಗೋಲಿಯ, ಕಜಕ್‌ಸ್ತಾನ್, ದಕ್ಷಿಣ ಕೊರಿಯಾ, ಟರ್ಕಿ ಮತ್ತು ವಿಯಾಟ್ನಂಗಳು ಈ ಹೆದ್ದಾರಿ ಒಪ್ಪಂದಕ್ಕೆ ಸಹಿ ಹಾಕಿವೆ. ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿ (ಏಷ್ಯಾ)ಯ 60ನೇ ಅಧಿವೇಶನದಲ್ಲಿಯೇ ಬಹುತೇಕ ರಾಷ್ಟ್ರಗಳು ಈ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದವು. ಈ ಸಭೆ ಇತ್ತೀಚೆಗೆ ಷಾಂಘೖನಲ್ಲಿ ಜರುಗಿತ್ತು .
ರಾಜಧಾನಿಗಳು, ಪ್ರಮುಖ ಬಂದರುಗಳು, ಪ್ರವಾಸ ಸ್ಥಳಗಳು ಹಾಗೂ ಪ್ರಮುಖ ವ್ಯಾಪಾರಿ ಕೇಂದ್ರಗಳಿಗೆ ಏಷ್ಯನ್ ಹೆದ್ದಾರಿ ಯೋಜನೆ ಸಂಪರ್ಕ ಕಲ್ಪಿಸಲಿದೆ. 2010ರೊಳಗೆ ಈ ಯೋಜನೆ ಪೂರ್ಣವಾಗಲಿದ್ದು , ಯೋಜನೆ ಪೂರ್ಣವಾದ ನಂತರ ಟೋಕಿಯಾದಿಂದ ಇಸ್ತಾಂಬುಲ್‌ಗೆ ವಾಹನಗಳು ನೇರವಾಗಿ ಚಲಿಸಬಹುದು. ದ್ವೀಪ ರಾಷ್ಟ್ರಗಳಾದ ಜಪಾನ್, ಫಿಲಿಪ್ಪೈನ್ಸ್ ಮತ್ತು ಶ್ರೀಲಂಕಾ ದೇಶಗಳು ಕೂಡ ಪ್ರಮುಖ ದೇಶಗಳೊಂದಿಗೆ ಸಂಪರ್ಕ ಹೊಂದುವುದು ಹೆದ್ದಾರಿ ಯೋಜನೆಯಿಂದ ಸಾಧ್ಯವಾಗುತ್ತದೆ.
ಏಷ್ಯಾದ ಹೆದ್ದಾರಿ ಯೋಜನೆಗೆ ಭಾರತ ಸಹಿ ಮಾಡಿರುವುದು ಒಂದು ಐತಿಹಾಸಿಕ ಘಟನೆ ಎಂದು ಷಾಂಘೖ ಅಧಿವೇಶನದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದ ವಿತ್ತ ಕಾರ್ಯದರ್ಶಿ ದೀಪಕ್ ಚಟರ್ಜಿ ಬಣ್ಣಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications