ಚುನಾವಣೆ : ರಾಜ್ಯದ 70 ಮತಗಟ್ಟ್ಟೇಲಿ ಗುರುವಾರ ಮರು ಮತದಾನ
ಚುನಾವಣೆ : ರಾಜ್ಯದ 70 ಮತಗಟ್ಟ್ಟೇಲಿ ಗುರುವಾರ ಮರು ಮತದಾನ
ಏಪ್ರಿಲ್ 26 ರಂದು ಎರಡನೇ ಹಾಗೂ ಅಂತಿಮ ಹಂತದ ಚುನಾವಣೆ
ರಾಜ್ಯದ 11 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯ 70 ಮತಗಟ್ಟೆಗಳಲ್ಲಿ ಗುರುವಾರ ಮರು ಮತದಾನ ನಡೆಯಲಿದೆ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಅಭಿಜಿತ್ ದಾಸ್‌ಗುಪ್ತ ಬುಧವಾರ (ಏ.21) ಸುದ್ದಿಗಾರರಿಗೆ ತಿಳಿಸಿದರು.
ಮರು ಮತದಾನ ನಡೆಯುವ ಮತಗಟ್ಟೆಗಳು :
ಬೆಂಗಳೂರು ಉತ್ತರ (6 ಮತಗಟ್ಟೆ ), ದಾವಣಗೆರೆ (9), ಬಿಜಾಪುರ (3), ಬೆಂಗಳೂರು ದಕ್ಷಿಣ (20), ಕೊಪ್ಪಳ (5), ಬಾಗಲಕೋಟೆ (5), ಬೀದರ್(1), ಚಿಕ್ಕಬಳ್ಳಾಪುರ (6), ಕೋಲಾರ (8), ಗುಲ್ಬರ್ಗಾ (3) ಹಾಗೂ ಬಳ್ಳಾರಿ (4).
ಏಪ್ರಿಲ್ 20ರಂದು ನಡೆದ ಚುನಾವಣೆಯಲ್ಲಿ - ನಕಲಿ ಮತದಾನ, ಹಿಂಸಾಚಾರ, ಮತಯಂತ್ರಗಳ ವಶಕ್ಕೆ ಯತ್ನ ಮುಂತಾದ ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಮೇಲಿನ ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲು ಆಯೋಗ ನಿರ್ಧರಿಸಿದೆ.
ಏಪ್ರಿಲ್ 26 ರಂದು ಎರಡನೇ ಹಾಗೂ ಅಂತಿಮ ಹಂತದ ಚುನಾವಣೆಗಳು ರಾಜ್ಯದಲ್ಲಿ ನಡೆಯಲಿವೆ.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications