ಮೊದಲ ಹಂತ ಮತದಾನದಿ ಕಾಂಗ್ರೆಸ್‌ಗೆ ಮುನ್ನಡೆ:ಪೂಜಾರಿ ಭವಿಷ್ಯ
ಮೊದಲ ಹಂತ ಮತದಾನದಿ ಕಾಂಗ್ರೆಸ್‌ಗೆ ಮುನ್ನಡೆ:ಪೂಜಾರಿ ಭವಿಷ್ಯ
ರಾಜ್ಯದ 120ರಲ್ಲಿ 97 ಮತ್ತು ಕೇಂದ್ರದ 15ರಲ್ಲಿ 13 ಸ್ಥಾನಗಳಲ್ಲಿ ಜಯಭೇರಿ
ಮತದಾನ ಸಂದರ್ಭದಲ್ಲಿ ಬೆಳಗ್ಗೆಯಿಂದ ಸಂಜೆ 5.00ಗಂಟೆಯವರೆಗೆ ನಡೆಸಿದ ಮಾದರಿ ಸಮೀಕ್ಷೆಯಿಂದ ಈ ಅಂಕಿಅಂಶ ದೊರೆತಿದೆ. 70 ಮತಗಟ್ಟೆಯಲ್ಲಿ ಎಲ್ಲಾ ವಯೋಮಿತಿಯ 10500 ಮಂದಿಯನ್ನು ಸಂದರ್ಶಿಸಲಾಯಿತು ಎಂದು ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.
ಮೊದಲ ಹಂತದ ವಿಧಾನ ಸಭಾ ಕ್ಷೇತ್ರಗಳ ಪೈಕಿ- ಕಾಂಗ್ರೆಸ್ 97, ಬಿಜೆಪಿ 15, ಜೆಡಿಎಸ್ 6, ಜೆಡಿಯು 2 ಸ್ಥಾನಗಳನ್ನು ಪಡೆಯಲಿದೆ. ಪಕ್ಷವು ರಾಜ್ಯದಲ್ಲಿ 173ಕ್ಕಿಂತಲೂ ಹೆಚ್ಚಿನ ಸ್ಥಾನ ಮತ್ತು 24 ಲೋಕಸಭಾ ಸ್ಥಾನಗಳಲ್ಲಿ ವಿಜಯಿಯಾಗಲಿದೆ. ಆ ಮೂಲಕ ಪಕ್ಷವು ಸಂಪೂರ್ಣ ಬಹುಮತ ಪಡೆಯುತ್ತದೆ ಎಂದು ಆಂತರಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ರಾಜ್ಯದಲ್ಲೀಗ ಕಾಂಗ್ರೆಸ್ ಅಲೆ ಇರುವುದು ಇದಕ್ಕೆ ಕಾರಣ ಎಂದು ಪೂಜಾರಿ ಹೇಳಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications