ಹೊಗೆ ಸೂಸುವ ವಾಹನಪತ್ತೆ ಗೆ ದೆಹಲಿಯಲ್ಲಿ ಶ್ರೀಮಂತ ತಂತ್ರಜ್ಞಾನ
ಹೊಗೆ ಸೂಸುವ ವಾಹನಪತ್ತೆ ಗೆ ದೆಹಲಿಯಲ್ಲಿ ಶ್ರೀಮಂತ ತಂತ್ರಜ್ಞಾನ
ರಸ್ತೆಯಲ್ಲಿ ಹಾದು ಬಿಟ್ಟ ಗ್ರಹಿಕಾ ಕಿರಣಗಳು ಮಾಲಿನ್ಯದ ಪ್ರಮಾಣವನ್ನು ದಾಖಲಿಸುತ್ತವೆ.
ಅಮೇರಿಕಾ ತಯಾರಿಸಿದ ಈ ತಂತ್ರಜ್ಞಾನವು ರಸ್ತೆಯಲ್ಲಿ ಚಲಿಸುವ ವಾಹನಗಳ ಮಾಲಿನ್ಯ ಪ್ರಮಾಣವನ್ನು ಪತ್ತೆ ಹಚ್ಚಲಿದೆ. ರಸ್ತೆಯಲ್ಲಿ ಅಡ್ಡಲಾಗಿ ಹಾಯುವ ಈ ಗ್ರಹಿಕಾ ಬೆಳಕಿನ ಕಿರಣಗಳು ಮಾಲಿನ್ಯ ಪ್ರಮಾಣವನ್ನು ಪತ್ತೆ ಹಚ್ಚಬಲ್ಲವು. ಈ ಮೂಲಕ ಹಾದು ಹೋಗುವ ಪ್ರತಿಯಾಂದು ವಾಹನಗಳ ಮಾಲಿನ್ಯ ಪ್ರಮಾಣವನ್ನು ನಿರ್ದಿಷ್ಟವಾಗಿ ದಾಖಲಿಸಬಹುದು.
ಒಂದೇ ಬಾರಿಗೆ ಹಲವು ವಾಹನಗಳು ರಸ್ತೆಯಲ್ಲಿ ಹೋದರೂ ಮಾಲಿನ್ಯದ ಪ್ರಮಾಣವನ್ನು ದಾಖಲಿಸಿಕೊಳ್ಳುವ ಸಾಮರ್ಥ್ಯವನ್ನು ಈ ತಂತ್ರಜ್ಞಾನ ಹೊಂದಿದೆ. ಇದನ್ನು ಪರಿಕ್ಷಾರ್ಥವಾಗಿ ಸರಕಾರದ ‘ಮಾಲಿನ್ಯ ವಾಹನಗಳ ವಿರುದ್ಧ 4 ವಾರ ’ ಸಪ್ತಾಹದಲ್ಲಿ ಇರಿಸಲಾಗುವುದು ಎಂದು ದೆಹಲಿ ಸಾರಿಗೆ ಸಚಿವ ಹಾರುನ್ ಯೂಸುಫ್ ಹೇಳಿದ್ದಾರೆ.
ಈ ತಾಂತ್ರಿಕತೆಯನ್ನು ಅಳವಡಿಸಿದ ಅಮೇರಿಕಾ, ಇಂಗ್ಲಂಡ್, ಜಪಾನ್ ಮತ್ತಿತರ 11 ಪ್ರತಿಷ್ಠಿತ ದೇಶಗಳ ಪೈಕಿ ಭಾರತ ಒಂದಾಗಿದೆ.
ಇದರ ನಿರ್ವಹಣೆಗೆ ಒಂದು ಕೇಂದ್ರವನ್ನು ತೆಗೆಯಲಾಗುವುದು. ಚಲಿತ ಮಾಲಿನ್ಯ ನಿಯಂತ್ರಣ ತಡೆಗೆ ಮಹತ್ವ ನೀಡಲಾಗುವುದು. ಇದರ ಮಾದರಿ ಅಧ್ಯಯನ ಮತ್ತು ಪರಿಕ್ಷೆಯನ್ನು ಪುಣೆಯಲ್ಲಿ ದೆಹಲಿ ಸಾರಿಗೆ ಇಲಾಖೆ, ಆ್ಯಟೋಮೇಟಿವ್ ರಿಸರ್ಚ್ ಎಸೋಸಿಯೇಷನ್ ಆಫ್ ಇಂಡಿಯಾ ಮತ್ತು ಯುಎಸ್ ಕಂಪೆನಿ ಎನ್‌ವೈಯರ್‌ಮೆಂಟಲ್ ಸಿಸ್ಟಮ್ಸ್ ಪ್ರೋಡಕ್ಟ್‌ಜೊತೆಯಾಗಿ ನಡೆಸಿದೆ ಎಂದು ಯೂಸುಫ್ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications