ಏ.26ರ ಚುನಾವಣೆ, ರಾಜ್ಯದಿ ಅಪರಾಧ ಹಿನ್ನೆಲೆಯ 91 ಅಭ್ಯರ್ಥಿಗಳು
ಏ.26ರ ಚುನಾವಣೆ, ರಾಜ್ಯದಿ ಅಪರಾಧ ಹಿನ್ನೆಲೆಯ 91 ಅಭ್ಯರ್ಥಿಗಳು
ಅತಿ ಹೆಚ್ಚು ಅಪರಾಧಿಗಳನ್ನು ಕಣಕ್ಕಿಳಿಸಿದ ಕೀರ್ತಿಗೆ ಬಿಜೆಪಿ ಭಾಜನ
ಬಿಜೆಪಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ (21) ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸಿದರೆ , ಜೆಡಿಎಸ್ ಮತ್ತು ಕಾಂಗ್ರೆಸ್ ಕ್ರಮವಾಗಿ 19 ಮತ್ತು 12 ಮಂದಿಯನ್ನು ಅಖಾಡಕ್ಕಿಳಿಸಿದೆ. ಉಳಿದ 39 ಮಂದಿ ಪಕ್ಷೇತರ ಮತ್ತು ಇತರ ಪಕ್ಷಗಳ ಅಭ್ಯರ್ಥಿಯಾಗಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯಾದ ಕರ್ನಾಟಕ ಚುನಾವಣಾ ವೀಕ್ಷಣಾ ಸಮಿತಿ (ಕೆಇಸಿ) ತಿಳಿಸಿದೆ.
ಮತದಾನ ನಡೆಯಲಿರುವ 104 ವಿಧಾನ ಸಭಾ ಕ್ಷೇತ್ರಗಳ ಪೈಕಿ 98 ಕ್ಷೇತ್ರಗಳಿಂದ ಈ ಅಂಕಿಅಂಶ ಪಡೆಯಲಾಗಿದೆ. ಇದು ಅಭ್ಯರ್ಥಿಯು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನಮೂದಿಸಿದ ದಾಖಲೆಗಳಿಂದ ಪಡೆದ ವರದಿ. ಆದ್ದರಿಂದ ಆಭ್ಯರ್ಥಿಗಳ ಸ್ವಯಂ ಘೋಷಿತ ಅಪರಾಧಗಳು ಇವಾಗಿವೆ ಎಂದು ಕೆಇಸಿ ಸಂಚಾಲಕ ತ್ರಿಲೋಚನ ಶಾಸ್ತ್ರಿ ಹೇಳಿದರು.
4 ಪ್ರಕರಣಗಳು ಐಪಿಸಿ 302-ಕೊಲೆ, 7 ಪ್ರಕರಣಗಳು ಐಪಿಸಿ 307- ಕೊಲೆಯತ್ನ , ಐಪಿಸಿ 70- ಹಿಂಸಾಚಾರ, ಮಾರಕಾಯುಧ ಬಳಕೆ ಮಂತಾದ ಪ್ರಕರಣಗಳ ಅಪರಾಧಗಳು ದಾಖಲಾಗಿವೆ.
ಧರಣಿ, ಮುಷ್ಕರ ಮಂತಾದ ವಿಷಯಗಳಲ್ಲಿ ಕೇಸು ದಾಖಲಾಗಿರುವ ಬಗ್ಗೆ ಗಮನ ಸೆಳೆದಾಗ ಅವರು ಇಂಡಿಯನ್ ಪೀನಲ್ ಕೋಡ್ ಆಧಾರದಲ್ಲಿ ಅಪರಾಧವನ್ನು ಪರಿಗಣಿಸಲಾಗಿದೆ ಎಂದು ಉತ್ತರಿಸಿದರು.
(ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications