ನಗೆಯಜ್ಜಿ ಸುನಂದಮ್ಮಗೆ ಲೇಖಕಿಯರ ಸಂಘದ ‘ಅನುಪಮಾ’ ಪ್ರಶಸ್ತಿ

ನಗೆಯಜ್ಜಿ ಸುನಂದಮ್ಮಗೆ ಲೇಖಕಿಯರ ಸಂಘದ ‘ಅನುಪಮಾ’ ಪ್ರಶಸ್ತಿ
ಮೇ 16ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಬೆಂಗಳೂರು : ಕರ್ನಾಟಕ ಲೇಖಕಿಯರ ಸಂಘದ ಪ್ರತಿಷ್ಠಿತ ಅನುಪಮಾ ಪ್ರಶಸ್ತಿಗೆ ನಗೆಯಜ್ಜಿ ಟಿ.ಸುನಂದಮ್ಮ ಆಯ್ಕೆಯಾಗಿದ್ದಾರೆ.

ಹಾಸ್ಯ ಸಾಹಿತ್ಯಕ್ಕೆ ಸುನಂದಮ್ಮನವರು ಸಲ್ಲಿಸಿರುವ ವಿಶಿಷ್ಟ ಸೇವೆ, ಲೇಖಕಿಯರಿಗೆ ಅವರು ನೀಡಿರುವ ಪ್ರೋತ್ಸಾಹ ಹಾಗೂ ಸಂಘ ಸಂಸ್ಥೆಗಳ ನಡುವೆ ಸೇತುವಾಗಿ ಬೆಳೆದ ಸಾಧನೆಯನ್ನು ಪರಿಗಣಿಸಿ 2004ರ ಅನುಪಮಾ ಪ್ರಶಸ್ತಿ ಗೆ ಆಯ್ಕೆ ಮಾಡಲಾಗಿದೆ ಎಂದು ಲೇಖಕಿಯರ ಸಂಘದ ಪ್ರಕಟಣೆ ತಿಳಿಸಿದೆ.

ವ್ಯಾಸರಾಯ ಬಲ್ಲಾಳ, ಕಮಲಾ ಹಂಪನಾ ಹಾಗೂ ಡಾ.ಆರ್‌.ಪೂರ್ಣಿಮಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಸುನಂದಮ್ಮನವರನ್ನು ಅನುಪಮಾ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸುನಂದಮ್ಮನವರು 15 ಕೃತಿಗಳನ್ನು ರಚಿಸಿದ್ದು , ಅವರ ಸಮಗ್ರ ಸಾಹಿತ್ಯವೂ ಪ್ರಕಟವಾಗಿದೆ.

ಬೆಂಗಳೂರಿನ ಮಿಥಿಕ್‌ ಸೊಸೈಟಿಯಲ್ಲಿ ಮೇ 16 ರಂದು ನಡೆಯುವ ಸಮಾರಂಭದಲ್ಲಿ ಅನುಪಮಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲೇಖಕಿಯರ ಸಂಘದ ಅಧ್ಯಕ್ಷೆ ಉಷಾ ಪಿ.ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 10 ಸಾವಿರ ರುಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಅನುಪಮಾ ಪ್ರಶಸ್ತಿ ಒಳಗೊಂಡಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+