ಬಿಜೆಪಿಯ ಜಾಹಿರಾತಿನ ವಿರುದ್ಧ ಆನ್‌ಲೈನ್ ಲಾಟರಿ ಕಂಪೆನಿ ದೂರು
ಬಿಜೆಪಿಯ ಜಾಹಿರಾತಿನ ವಿರುದ್ಧ ಆನ್‌ಲೈನ್ ಲಾಟರಿ ಕಂಪೆನಿ ದೂರು
ಚುನಾವಣಾ ಆಯೋಗದ ಮುಂದೆ ಲಾಟರಿ ಕಂಪೆನಿಯ ಮಾನನಷ್ಟ ಮೊಕದ್ದಮೆ
ಕರ್ನಾಟಕ ರಾಜ್ಯ ಸರಕಾರದ ‘ಪ್ಲೇವಿನ್’ ಆನ್ ಲೈನ್ ಲಾಟರಿ ಮಾರುಕಟ್ಟೆ ಮಾಡುತ್ತಿರುವ ‘ಜೀ ಬಳಗ’ದ ‘ಆಲ್ಟ್ರ ಎಂಟಟೈನ್‌ಮೆಂಟ್ ಸೊಲ್ಯೂಶನ್ಸ್ ಪ್ರೆೃವೆಟ್ ಲಿಮೆಟೆಡ್’ ಸಂಸ್ಥೆಯು ತಾನು ಬಿಜೆಪಿಯ ಚುನಾವಣಾ ಜಾಹಿರಾತಿನ ಬಲಿಪಶು ಎಂದು ಚುನಾವಣಾ ಆಯುಕ್ತರಿಗೆ ದೂರು ನೀಡಿದೆ.
ಬಿಜೆಪಿಯು ತನ್ನ ಪಕ್ಷದ ಪ್ರಚಾರದ ಸಂದರ್ಭದಲ್ಲಿ ಮಾನನಷ್ಟ ಜಾಹಿರಾತುಗಳನ್ನು ನೀಡುತ್ತಿದೆ. ಅದಲ್ಲದೆ ವಿಶೇಷವಾಗಿ ‘ಪ್ಲೇವಿನ್ ೆ ವಿರುದ್ಧದ ಜಾಹಿರಾತನ್ನು ಹೆಚ್ಚಾಗಿ ನೀಡುತ್ತಿದೆ ಎಂದು ದೂರಿನಲ್ಲಿ ಕಂಪನಿ ಹೇಳಿಕೊಂಡಿದೆ.
‘...ನೀವು ತೆಲಗಿಯ ಜೊತೆ ನಿರ್ವಹಿಸುವುದಕ್ಕೆ ಆಶೀರ್ವಾದ ಪಡೆದಿಲ್ಲವಾ? ಬೇಸರ ಬೇಡ . ಸರಕಾರ ನಿಮಗಾಗಿ ಸಮಾನಾದ ಅವಕಾಶ ಮಾಡಿಕೊಟ್ಟಿದೆ. ಸರಕಾರ ಮಾಡಿಕೊಟ್ಟ ಹೈಟೆಕ್ ಜೂಜಾಟದಲ್ಲಿ ಪಾಲ್ಗೊಳ್ಳಬಹುದು....’ ಇಂತಹ ವಾಕ್ಯಗಳು ಜಾಹಿರಾತಿನಲ್ಲಿವೆ. ಅಷ್ಟೇ ಅಲ್ಲದೆ, ಈ ಜಾಹೀರಾತು ಮುಖ್ಯಮಂತ್ರಿ ಎಸ್ಸೆಂ ಕೃಷ್ಣರನ್ನು ಸಹ ಬಹುವಾಗಿ ನಿಂದಿಸಿದೆ ಎಂದು ಸಂಸ್ಥೆಯ ಕರ್ನಾಟಕ ಮಾರಾಟ ವಿಭಾಗದ ಮುಖ್ಯಸ್ಥ ವಿ.ಗುರುರಾಜ್ ಹೇಳಿದರು.
ರಾಜ್ಯದಲ್ಲಿ ‘ಪ್ಲೇವಿನ್’ ಒಂದೇ ಲಾಟರಿ ಇರುವುದಲ್ಲ. ಇದು ರಾಜ್ಯದಲ್ಲಿ ಮಾರಾಟವಾಗುವ ಒಟ್ಟು ಲಾಟರಿಯ ಶೇಕಡಾ 10 ಭಾಗ ಮಾತ್ರ ಎಂದು ಗುರುರಾಜ್ ಹೇಳಿದರು.
( ಪಿಟಿಐ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications