ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಪ್ರಭಾವಶಾಲಿ ವ್ಯಕಿಗಳ ಸಾಲಿನಲ್ಲಿ ಅಟಲ್‌, ಅಜೀಂ, ಐಶ್ವರ್ಯ

By Staff
|
Google Oneindia Kannada News

ವಿಶ್ವದ ಪ್ರಭಾವಶಾಲಿ ವ್ಯಕಿಗಳ ಸಾಲಿನಲ್ಲಿ ಅಟಲ್‌, ಅಜೀಂ, ಐಶ್ವರ್ಯ
ಟೈಮ್‌ ಪತ್ರಿಕೆ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಹೆಸರು ಬಿಡುಗಡೆ

ಲಂಡನ್‌: ಲಂಡನ್‌ನ ಪ್ರತಿಷ್ಠಿತ ಟೈಮ್‌ ಪತ್ರಿಕೆ ವಿಶ್ವದ 100 ಪ್ರಭಾವಶಾಲಿ ವ್ಯಕ್ತಿಗಳ ಹೆಸರನ್ನು ಏಪ್ರಿಲ್‌ 18ರಂದು ಬಿಡುಗಡೆ ಮಾಡಿದೆ. ಟೈಮ್‌ ಪತ್ರಿಕೆ ಗುರುತಿಸಿರುವ ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಸಾಲಿನಲ್ಲಿ ಭಾರತದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ, ಕರಾವಳಿಯ ಬಾಲಿವುಡ್‌(ಬಾಂಡ್‌) ಬೆಡಗಿ ಐಶ್ವರ್ಯ ರೈ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ಮತ್ತೂ ಯೋಗಾಸನ ಗುರು ಬಿ.ಕೆ.ಎಸ್‌. ಅಯ್ಯಂಗಾರ್‌ ಸೇರಿದ್ದಾರೆ.

ವಿಶ್ವದ ನಾಯಕ ಮತ್ತು ಕ್ರಾಂತಿಕಾರಿಗಳ ಪಟ್ಟಿಯಲ್ಲಿ ವಾಜಪೇಯಿ, ಅಮೆರಿಕದ ಅಧ್ಯಕ್ಷ ಜಾರ್ಜ್‌ ಬುಷ್‌, ರಶ್ಯಾದ ವ್ಲಾಡಿಮಿರ್‌ ಪುಟಿನ್‌, ಬಿಲ್‌ ಗೇಟ್ಸ್‌ ಮತ್ತು ಒಸಾಮಾ ಬಿನ್‌ ಲಾಡೆನ್‌ ಹೆಸರುಗಳಿವೆ!

ವಿಶ್ವದ ಸುರಸುಂದರಿಯರಲ್ಲಿ ಐಶ್ವರ್ಯ ರೈಯನ್ನು ಹೆಸರಿಸಲಾಗಿದೆ. ವಿಪ್ರೋ ಅದ್ಯಕ್ಷ ಅಜೀಂ ಪ್ರೇಮ್‌ಜಿ ಹೆಸರು ಉದ್ಯಮಿಗಳ ಪಟ್ಟಿಯಲ್ಲಿ ಪ್ರಕಟಿಸಲಾಗಿದೆ. ಮಾಧ್ಯಮ ಚಕ್ರವರ್ತಿ ಎಂದೇ ಖ್ಯಾತಿ ಹೊಂದಿರುವ ರೂಪರ್ಟ್‌ ಮರ್ಡೋಕ್‌ ಮತ್ತು ಅರಬ್‌ ಟಿವಿ ಚಾನಲ್‌ ಅಲ್‌ ಜಜೀರಾ ಹೆಸರೂ ಪಟ್ಟಿಯಲ್ಲಿ ಸೇರಿದೆ.

ಹೀರೋಗಳ ಸಾಲಿನಲ್ಲಿ ಅಮೆರಿಕದಲ್ಲಿ ಯೋಗ ಕಲಿಸುವ ಬಿ.ಕೆ.ಎಸ್‌. ಅಯ್ಯಂಗಾರ್‌, ದಲೈಲಾಮ, ನೆಲ್ಸನ್‌ ಮಂಡೇಲಾ ಮುಂತಾದವರಿದ್ದಾರೆ. ಖ್ಯಾತ ಸಿತಾರ್‌ ವಾದಕ ಪಂಡಿತ್‌ ರವಿಶಂಕರ್‌ ಅವರ ಪುತ್ರಿ ನೋರಾ ಜೋನ್ಸ್‌ ಹೆಸರೂ ಸೇರಿದೆ.

ಎಲ್ಲಕ್ಕಿಂತ ಕುತೂಹಲಕಾರಿ ಹಾಗೂ ಅಚ್ಚರಿಯ ಸಂಗತಿಯೆಂದರೆ ನಾಯಕರ ಮತ್ತು ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಲಾಡೆನ್‌ ಹೆಸರು ಬಂದಿರುವುದಾಗಿದೆ. ಅದು ಹೇಗೆ ಬಂತೋ ಯಾವ ಕಾರಣಕ್ಕೆ ಬಂತೋ ಸದ್ಯಕ್ಕೆ ಪ್ರಶ್ನೆಯಾಗೇ ಉಳಿದಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X