ಬಿಲಿಯನ್
ಬಿಲಿಯನ್ $ ಕ್ಲಬ್‌ನಲ್ಲಿ ವಿಪ್ರೋ ; ಷೇರುದಾರರಿಗೆ ಹಬ್ಬವೋ ಹಬ್ಬ
2003-04ರ ವಿತ್ತ ವರ್ಷದಲ್ಲಿ 1031 ಕೋಟಿ ರು. ನಿವ್ವಳ ಲಾಭ
2003-04ನೇ ವಿತ್ತ ವರ್ಷದ ಲೆಕ್ಕಪತ್ರವನ್ನು ಏ.16ರ ಶುಕ್ರವಾರ ಬಿಡುಗಡೆ ಮಾಡಿದ ವಿಪ್ರೋ, ತನ್ನ ಷೇರುದಾರರ ಪ್ರತಿ ಷೇರಿಗೆ ಎರಡು ಬೋನಸ್ ಷೇರುಗಳನ್ನು ಪ್ರಕಟಿಸಿತು. ಇದರೊಂದಿಗೆ ಪ್ರತಿ ಷೇರಿಗೆ 29 ರುಪಾಯಿ ಡಿವಿಡೆಂಡ್ ಹಾಗೂ ಹೆಚ್ಚುವರಿಯಾಗಿ 25 ರುಪಾಯಿಗಳ ನಗದು ಡಿವಿಡೆಂಡ್ ನೀಡುವುದಾಗಿ ಪ್ರಕಟಿಸಿತು.
ವಿಪ್ರೋ 2003-04ನೇ ಸಾಲಿನ ವಿತ್ತವರ್ಷದಲ್ಲಿ 1031 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ನಿಕಟಪೂರ್ವ ವಿತ್ತವರ್ಷಕ್ಕೆ ಹೋಲಿಸಿದಾಗ, ಲಾಭಾಂಶದ ಪ್ರಮಾಣ ಶೇ.26 ರಷ್ಟು ಏರಿಕೆಯಾಗಿದ್ದು , ರುಪಾಯಿ ಲೆಕ್ಕದಲ್ಲಿ ಈ ಲಾಭ 829 ಕೋಟಿ ರು.ಗಳಗಿದೆ.
ಕಳೆದ ತ್ರೆೃಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 5881 ಕೋಟಿ ರುಪಾಯಿ. 2002-03 ನೇ ತ್ರೆೃಮಾಸಿಕದಲ್ಲಿ ಈ ಆದಾಯ 4338 ಕೋಟಿ ರುಪಾಯಿ. ಹೀಗಾಗಿ ವಿಪ್ರೋದ ಆದಾಯದಲ್ಲಿ ಶೇ.36ರ ಏರಿಕೆ ದಾಖಲಾಗಿದೆ.
ಮಾರ್ಚ್ 31, 2004ಕ್ಕೆ ಕೊನೆಗೊಂಡ ನಾಲ್ಕನೇ ತ್ರೆೃಮಾಸಿಕದಲ್ಲಿ ಕಂಪನಿಯ ಒಟ್ಟು ಆದಾಯ 1786 ಕೋಟಿ ರುಪಾಯಿ. ನಿಕಟಪೂರ್ವ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ ಆದಾಯ 1237 ಕೋಟಿ ರುಪಾಯಿ ಆಗಿದ್ದು , ಶೇ.44ರ ಹೆಚ್ಚಳವನ್ನು ಕಂಪನಿ ದಾಖಲಿಸಿದೆ. ಈ ತ್ರೆೃಮಾಸಿಕದಲ್ಲಿ ವಿಪ್ರೋದ ಲಾಭಾಂಶ 320 ಕೋಟಿ ರುಪಾಯಿ. ನಿಕಟಪೂರ್ವ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ ಲಾಭಾಂಶದ ಪ್ರಮಾಣ 232 ಕೋಟಿ ರು.ಗಳಾಗಿದ್ದು , ಶೇ.42 ರ ಏರಿಕೆ ದಾಖಲಿಸಿದೆ.
ಪ್ರೇಂಜಿ ಹರ್ಷ : ಐಟಿ ಉತ್ಪನ್ನಗಳು ಹಾಗೂ ಇತರ ಸೇವೆಗಳಿಂದಾಗಿ ವಿಪ್ರೋ ಅದ್ಭುತ ಪ್ರಗತಿ ದಾಖಲಿಸಿದೆ. ಐಟಿ ಸೇವೆಗಳಿಂದಲೇ 1 ಬಿಲಿಯನ್ ಡಾಲರ್‌ಗಳ ಆದಾಯ ಗಳಿಸಿರುವುದಾಗಿ ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಂಜಿ ಹೇಳಿದರು.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications