ಆರ್ಥಿಕ ಭವಿಷ್ಯ: ಜಾಗತಿಕ ಮುನ್ನಡೆ, ಭಾರತ-ಚೀನಾ ಕೊಂಚ ಹಿನ್ನಡೆ
ಆರ್ಥಿಕ ಭವಿಷ್ಯ: ಜಾಗತಿಕ ಮುನ್ನಡೆ, ಭಾರತ-ಚೀನಾ ಕೊಂಚ ಹಿನ್ನಡೆ
ಭಾರತದ ಆರ್ಥಿಕ ಬೆಳವಣಿಗೆ ಶೇ.6.5ರಿಂದ 6.3ಕ್ಕೆ ಕುಸಿತ
ಕಳೆದ ವರ್ಷ ಶೇ.2.6 ರಷ್ಟಿದ್ದ ಆರ್ಥಿಕ ಬೆಳವಣಿಗೆಯ ದರ ಈ ಸಲ ಶೇ.3.7 ಕ್ಕೆ ಹೆಚ್ಚಲಿದೆ. ಆದರೆ, ವಿತ್ತ ವರ್ಷದ ದ್ವಿತೀಯಾರ್ಧದಲ್ಲಿ ಶೇ.3.4 ಕ್ಕೆ ಇಳಿಯಲಿದೆ ಎಂದು ಜಾಗತಿಕ ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. 60 ದೇಶಗಳ 100 ಪ್ರಮುಖ ಆರ್ಥಿಕ ತಜ್ಞರು ಗುರುವಾರದ (ಏ.15) ವಿಶ್ವಸಂಸ್ಥೆಯ ಸಭೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರೊಜೆಕ್ಸ್ ಲಿಂಕ್ ಹೆಸರಿನ ಸರ್ಕಾರೇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಯಡಿ ಜಾಗತಿಕ ಆರ್ಥಿಕ ತಜ್ಞರು ಈ ಸಭೆ ನಡೆಸಿದ್ದಾರೆ.
ಆದರೆ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೊಂಚ ಇಳಿಮುಖವಾಗಲಿದೆ. ಕಳೆದ ವರ್ಷ ಶೇ.6.5ರಷ್ಟಿದ್ದ ಬೆಳವಣಿಗೆಯ ದರ ಈ ಬಾರಿ 6.3ಕ್ಕೆ ಇಳಿಯಲಿದ್ದು , ಈ ಇಳಿಕೆ ಮುಂದಿನ ವರ್ಷವೂ ಮುಂದುವರಿಯಲಿದೆ. ಅಂದರೆ ಮುಂದಿನ ವರ್ಷ ಆರ್ಥಿಕ ಬೆಳವಣಿಗೆಯ ದರ ಶೇ.6.1 ರಷ್ಟಿರಲಿದೆ ಎಂದು ತಜ್ಞರು ಅಂದಾಜು ಮಾಡಿದ್ದಾರೆ.
ಭಾರತ ಮಾತ್ರವಲ್ಲದೆ, ವಿಶ್ವದ ಮತ್ತೊಂದು ಪ್ರಬಲ ಆರ್ಥಿಕ ಶಕ್ತಿಯಾದ ಚೀನಾದ ಆರ್ಥಿಕ ಬೆಳವಣಿಗೆಯಲ್ಲೂ ಕುಂಠಿತವಾಗಲಿದೆ. ಕಳೆದ ವರ್ಷ ಶೇ.9.5 ರಷ್ಟಿದ್ದ ಆರ್ಥಿಕ ಬೆಳವಣಿಗೆಯ ದರ ಈ ವರ್ಷ 8.5ಕ್ಕೆ ಇಳಿಯಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications