ಇನ್ಫೋಸಿಸ್ ಐತಿಹಾಸಿಕ ಮುನ್ನಡೆ ; ದಕ್ಕಿದ ಬಿಲಿಯನ್ ಡಾಲರ್ ಗಡಿ
ಇನ್ಫೋಸಿಸ್ ಐತಿಹಾಸಿಕ ಮುನ್ನಡೆ ; ದಕ್ಕಿದ ಬಿಲಿಯನ್ ಡಾಲರ್ ಗಡಿ
2003-04ನೇ ವಿತ್ತ ವರ್ಷದಲ್ಲಿ 1243.83 ಕೋಟಿ ರುಪಾಯಿ ನಿವ್ವಳ ಲಾಭ
ನಿಕಟಪೂರ್ವ ವಿತ್ತ ವರ್ಷದಲ್ಲಿ 3622.69 ಕೋಟಿ ರುಪಾಯಿಗಳಷ್ಟಿದ್ದ ಲಾಭದ ಪ್ರಮಾಣ, 2003-04ರ ವಿತ್ತವರ್ಷದಲ್ಲಿ 4760.89 ಕೋಟಿ ರು.ಗೆ ಮುಟ್ಟಿದೆ. ಏರಿಕೆಯ ಪ್ರಮಾಣ ಶೇ.31ರಷ್ಟಿದೆ ಎಂದು ಇನ್ಫೋಸಿಸ್ ತಿಳಿಸಿದೆ (ಏ.13ರ ಮಂಗಳವಾರ).
ಅಮೆರಿಕನ್ ಡಾಲರ್‌ಗಳಲ್ಲಿ ಇನ್ಫೋಸಿಸ್‌ನ ಲಾಭ 1 ಬಿಲಿಯನ್ ಡಾಲರ್‌ಗಳ ಮ್ಯಾಜಿಕ್ ಫಿಗರ್ ದಾಟಿದೆ. 1999ರಲ್ಲಿ 121 ಮಿಲಿಯನ್‌ಗಳಿದ್ದ ಕಂಪನಿಯ ನಿವ್ವಳ ಲಾಭ, 2004ರಲ್ಲಿ 1.06 ಬಿಲಿಯನ್‌ಗೆ ಮುಟ್ಟಿದೆ ಎಂದು ಇನ್ಫೋಸಿಸ್ ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ನಂದನ್ ನೀಲೇಕಣಿ ತಿಳಿಸಿದ್ದಾರೆ.
ಪ್ರತಿ ಷೇರಿಗೆ 15 ರುಪಾಯಿಗಳ ಡಿವಿಡೆಂಡ್ ನೀಡಲು ಹಾಗೂ ನೂರು ರುಪಾಯಿಗಳ ವಿಶೇಷ ಡಿವಿಡೆಂಡ್ ನೀಡಲು ಕಂಪನಿಯ ನಿರ್ದೇಶಕರುಗಳ ಮಂಡಳಿ ಶಿಫಾರಸ್ಸು ಮಾಡಿದೆ ಎಂದು ನೀಲೇಕಣಿ ಹೇಳಿದರು.
ಮಾರ್ಚ್ 2004ಕ್ಕೆ ಕೊನೆಗೊಂಡ ನಾಲ್ಕನೇ ತ್ರೆೃಮಾಸಿಕದಲ್ಲಿ ಇನ್ಫೋಸಿಸ್ 337.05 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ಈ ಪ್ರಮಾಣ ಕಳೆದ ವಿತ್ತವರ್ಷದ ಇದೇ ತ್ರೆೃಮಾಸಿಕದಲ್ಲಿ 289.74 ಕೋಟಿ ರು. ಆಗಿದ್ದು , ಏರಿಕೆಯ ಪ್ರಮಾಣ ಶೇ.30 ರಷ್ಟಿದೆ.
ನಾರಾಯಣಮೂರ್ತಿ ಹರ್ಷ : ಇನ್ಫೋಸಿಸ್ ಐತಿಹಾಸಿಕ ಮೈಲುಗಲ್ಲು ದಾಟಿದ್ದು, ಈ ಸಾಧನೆಯ ಕುರಿತು ನನಗೆ ಅಪಾರ ಸಂತೋಷವಾಗಿದೆ ಎಂದು ಇನ್ಫೋಸಿಸ್ ರಾಜಗುರು ಎನ್.ಆರ್.ನಾರಾಯಣ ಮೂರ್ತಿ ತಿಳಿಸಿದ್ದಾರೆ. ನಂದನ್ ಹಾಗೂ ಅವರ ಬಳಗ ಅದ್ಭುತ ವಿಜಯ ಸಾಧಿಸಿದೆ ಎಂದು ನಾರಾಯಣಮೂರ್ತಿ ಬಣ್ಣಿಸಿದ್ದಾರೆ.
ನಿಗದಿಪಡಿಸಿದ ದಿನಾಂಕದೊಳಗಿನ ಸದಸ್ಯರ ಪ್ರತಿ ಷೇರಿಗೆ ಮೂರು ಬೋನಸ್ ಷೇರುಗಳನ್ನು ಇನ್ಫೋಸಿಸ್ ತನ್ನ ಐತಿಹಾಸಿಕ ಸಾಧನೆಯ ಸಂದರ್ಭದಲ್ಲಿ ಪ್ರಕಟಿಸಿದೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications