ರಫ್ತು ಸುದ್ದಿ: ವಿದೇಶಿ ಮಾರುಕಟ್ಟೆಗೆ ಬಿಇಎಲ್‌ಎಲೆಕ್ಟ್ರಾನಿಕ್‌ ಮತಯಂತ್ರ

ರಫ್ತು ಸುದ್ದಿ: ವಿದೇಶಿ ಮಾರುಕಟ್ಟೆಗೆ ಬಿಇಎಲ್‌ಎಲೆಕ್ಟ್ರಾನಿಕ್‌ ಮತಯಂತ್ರ
ಪ್ರಸ್ತುತ ಚುನಾವಣೆಗಾಗಿ ಬಿಇಎಲ್‌ನಿಂದ ಆಯೋಗಕ್ಕೆ 2.31 ಲಕ್ಷ ಮತಯಂತ್ರ

ಬೆಂಗಳೂರು : ದೇಶದ ಚುನಾವಣಾ ವ್ಯವಸ್ಥೆಯಲ್ಲಿ ತನ್ನ ಉತ್ಪನ್ನಗಳಾದ ಎಲೆಕ್ಟ್ರಾನಿಕ್‌ ಮತ ಯಂತ್ರಗಳ ಮೂಲಕ ಕ್ರಾಂತಿ ಉಂಟು ಮಾಡಿರುವ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ (ಬಿಇಎಎಲ್‌), ಇದೀಗ ಮತಯಂತ್ರಗಳ ರಫ್ತಿಗೆ ಮುಂದಾಗಿದೆ.

ಮಾಲವಿ, ಮಾರಿಷಸ್‌, ಮಲೇಷಿಯಾ ಮತ್ತು ಶ್ರೀಲಂಕಾ ದೇಶಗಳಿಗೆ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ರಫ್ತು ಮಾಡಲು ಬಿಇಎಲ್‌ ಉದ್ದೇಶಿಸಿದ್ದು , ಅಮೆರಿಕಾದ ಮಾರುಕಟ್ಟೆಯ ಮೇಲೆಯೂ ಕಣ್ಣಿಟ್ಟಿದೆ.

ಮತ ಚಲಾವಣಾ ಯಂತ್ರ ರಫ್ತು ಮಾಡುವ ಬಗೆಗೆ ಆ ರಾಷ್ಟ್ರಗಳೊಡನೆ ಮಾತುಕತೆಯನ್ನೂ ನಡೆಸಿದ್ದೇವೆ. ಮಾತುಕತೆ ಪ್ರಗತಿಯಲ್ಲಿದೆ ಎಂದು ಬಿಇಎಲ್‌ ಕಾರ್ಯದರ್ಶಿ ವ್ಯವಸ್ಥಾಪಕ ನಿರ್ದೇಶಕರಾದ ವೈ. ಗೋಪಾಲ್‌ ರಾವ್‌ ಅವರು ಏಪ್ರಿಲ್‌ 12 ರ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ದೇಶದಲ್ಲಿನ ಈ ಬಾರಿಯ ಚುನಾವಣೆಗಾಗಿ 2. 31 ಲಕ್ಷ ಯಂತ್ರಗಳನ್ನು ಬಿಇಎಲ್‌ ಚುನಾವಣಾ ಆಯೋಗಕ್ಕೆ ನೀಡಿದೆ. ಈವರೆಗೆ ಬಿಇಎಲ್‌ ಸಂಸ್ಥೆ ಚುನಾವಣಾ ಆಯೋಗಕ್ಕೆ ನೀಡಿರುವ ಮತ ಚಲಾವಣಾ ಯಂತ್ರದ ಸಂಖ್ಯೆ ಸುಮಾರು 5 ಲಕ್ಷ ಆಗಿದೆ. ಚುನಾವಣಾ ಆಯೋಗವು ಎಲ್ಲಾ ಬಗೆಯ ಚುನಾವಣೆಗಳಿಗೂ ಮತ ಯಂತ್ರ ಬಳಸುತ್ತಿದೆ. ಆದರೆ, ಲೋಕಸಭೆಯ ಚುನಾವಣೆಗೆಂದು ಎಲೆಕ್ಟ್ರಾನಿಕ್‌ ಮತಯಂತ್ರ ಬಳಸುತ್ತಿರುವುದು ಇದೇ ಮೊದಲು ಮತ್ತು ಇಷ್ಟೊಂದು ಪ್ರಮಾಣದ ಬೇಡಿಕೆ ಬಂದಿರುವುದೂ ಇದೇ ಮೊದಲು ಎಂದು ಗೋಪಾಲ್‌ ರಾವ್‌ ಹೇಳಿದರು.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+