ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಷು ಹಬ್ಬದ ಪ್ರಯುಕ್ತ ಏ.10-18ರವರೆಗೆ ಅಯ್ಯಪ್ಪ ಸ್ವಾಮಿ ದರ್ಶನ

By Staff
|
Google Oneindia Kannada News

ವಿಷು ಹಬ್ಬದ ಪ್ರಯುಕ್ತ ಏ.10-18ರವರೆಗೆ ಅಯ್ಯಪ್ಪ ಸ್ವಾಮಿ ದರ್ಶನ
ದೇವರ ಸನ್ನಿಧಿ ಹಾಗೂ ಪಂಪಾ ನದಿಯಲ್ಲಿ ನೀರಿನ ಕೊರತೆ ಉಂಟಾಗದಂತೆ ಸರ್ಕಾರದಿಂದ ಕ್ರಮ

ಬೆಂಗಳೂರು : ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇಗುಲದ ಬಾಗಿಲು ವಿಷು ಹಬ್ಬದ ಅಂಗವಾಗಿ ಏಪ್ರಿಲ್‌ 10, ಶನಿವಾರದಿಂದ ತೆರೆಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.ಏಪ್ರಿಲ್‌ 10, ಶನಿವಾರ ಸಂಜೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿದೆ. ವಿಷು ಹಬ್ಬ 8 ದಿನಗಳ ಕಾಲ ನಡೆಯಲಿದ್ದು , ಈ ಸಮಯದಲ್ಲಿ ಭಕ್ತರು ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಬಹುದು. ಏಪ್ರಿಲ್‌ 14 ರಂದು ವಿಷುಕಾಣಿ ನಡೆಯಲಿದೆ.ಸಹಸ್ರಕಲಶಂ, ಲಕ್ಷಾರ್ಚನೆ ಮುಂತಾದ ಸಾಂಪ್ರದಾಯಿಕ ಪೂಜಾವಿಧಿಗಳು ಏಪ್ರಿಲ್‌ 18ರಂದು ನಡೆಯಲಿವೆ. ಎಂಟು ದಿನಗಳ ಕಾಲವೂ ವಿವಿಧ ಪೂಜೆ-ಹವನಗಳನ್ನು ನಡೆಸಲಾಗುವುದು. ಏಪ್ರಿಲ್‌ 18ರ ಸಂಜೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲನ್ನು ಮತ್ತೆ ಮುಚ್ಚಲಾಗುವುದು ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.ಈ ನಡುವೆ, ವಿಷು ಹಬ್ಬದ ಸಮಯದಲ್ಲಿ ಶಬರಿಮಲೆಗೆ ಭೇಟಿ ಕೊಡುವ ಭಕ್ತರಿಗೆ ನೀರಿನ ತೊಂದರೆ ಉಂಟಾಗದಂತೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ದೇವಸ್ಥಾನದ ಆಡಳಿತ ಮಂಡಳಿಗೆ ಕೇರಳ ಸರ್ಕಾರ ಆಶ್ವಾಸನೆ ನೀಡಿದೆ. (ಇನ್ಫೋ ವಾರ್ತೆ)

ವಾರ್ತಾ ಸಂಚಯ
ಅಂಚೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ಪ್ರಸಾದ

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X