ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೃತ್ತಿಶಿಕ್ಷಣ ಬೋಧನಾಶುಲ್ಕ ಮುಪ್ಪಟ್ಟು?
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವೃತ್ತಿಶಿಕ್ಷಣ ಬೋಧನಾಶುಲ್ಕ ಮುಪ್ಪಟ್ಟು?
ಶುಲ್ಕ ನಿಗದಿ ಸಮಿತಿ ಮುಂದೆ ಬಂದ ದುಬಾರಿ ಪ್ರಸ್ತಾವನೆಗಳು
ಪ್ರಸ್ತುತ ವೈದ್ಯಕೀಯ ಶಿಕ್ಷಣಕ್ಕೆ 1.49 ಲಕ್ಷ , ದಂತ ವೈದ್ಯಕೀಯಕ್ಕೆ 1ಲಕ್ಷ ಮತ್ತು ತಾಂತ್ರಿಕ ಶಿಕ್ಷಣಕ್ಕೆ 50 ಸಾವಿರ ರುಪಾಯಿ ಬೋಧನಾ ಶುಲ್ಕ ಜಾರಿಯಲ್ಲಿದೆ. ಆದರೆ ಅದನ್ನು ಅನುಕ್ರಮವಾಗಿ 4ಲಕ್ಷ, 3.5 ಲಕ್ಷ ಮತ್ತು 1.25 ಲಕ್ಷಕ್ಕಿಂತಲೂ ಹೆಚ್ಚು ಏರಿಸ ಬೇಕೆಂದು ಹೆಚ್ಚಿನ ಖಾಸಗಿ ಕಾಲೇಜುಗಳು ಮನವಿ ಮಂಡಿಸಿವೆ.
ಬೆಂಗಳೂರು ಸಮೀಪದ ಒಂದು ಖಾಸಗಿ ಕಾಲೇಜ್ ವೈದ್ಯಕೀಯ ಶಿಕ್ಷಣ ಶುಲ್ಕ 7ಲಕ್ಷಕ್ಕೆ ಏರಿಸಬೇಕೆಂದು ಮನವಿ ಮಂಡಿಸಿದರೆ, ದೇಶದ ಅತ್ಯುತ್ತಮ ವೈದ್ಯ ಕಾಲೇಜು ಸೈಂಟ್ ಜಾನ್ಸ್ ಮಾತ್ರ ಈಗಿರುವ ಶುಲ್ಕವೇ ಸರಿಯಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ಎ.ಬಿ. ಮುರುಗೋಡು ನೇತೃತ್ವದ ಶುಲ್ಕ ನಿಗದಿ ಸಮಿತಿ ಈ ಪ್ರಸ್ತಾವನೆಗಳನ್ನು ಪರಿಶೀಲಿಸಲಿದೆ. ಕಳೆದ ವರ್ಷ ಆಗಸ್ಟ್ 14 ರಂದು ಸುಪ್ರೀಮ್ ಕೋರ್ಟ್ ನೀಡಿದ ಮಾರ್ಗ ಸೂಚಿಯನ್ವಯ ಸಮಿತಿ ಹಾಗೂ ಕಾಲೇಜುಗಳು ಕಾರ್ಯನಿರ್ವಹಿಸಲಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications