ಕರ್ನಾಟಕದ ಕುಬೇರ! 1520 ಕೋಟಿ ಆಸ್ತಿಯ ‘ಶ್ರೀ’ ‘ಒಡೆಯರ್’
ಕರ್ನಾಟಕದ ಕುಬೇರ! 1520 ಕೋಟಿ ಆಸ್ತಿಯ ‘ಶ್ರೀ’ ‘ಒಡೆಯರ್’
ಕಾಂಗ್ರೆಸ್ ನಾಯಕರಿಂದ ಸುಳ್ಳುಸುಳ್ಳು ಆಸ್ತಿ ವಿವರ -ಕಾಂತಾ
ಮೈಸೂರು ಹಾಗೂ ಬೆಂಗಳೂರಿನ ಅರಮನೆಗಳನ್ನು ತಮ್ಮ ಆಸ್ತಿಯೆಂದು ಪ್ರಕಟಿಸಿರುವ ಒಡೆಯರ್- ತಾವು ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ ಎಂದೂ ತಿಳಿಸಿದ್ದಾರೆ. ಒಡೆಯರ್ ಘೋಷಿಸಿರುವ ಆಸ್ತಿಯಲ್ಲಿ ಮೈಸೂರು-ಬೆಂಗಳೂರು ಅರಮನೆಗಳು ಮಾತ್ರವಲ್ಲದೆ, ಚಾಮುಂಡಿ ಬೆಟ್ಟದಲ್ಲಿರುವ ರಾಜೇಂದ್ರವಿಲಾಸ್ ಪ್ಯಾಲೇಸ್, ಊಟಿಯಲ್ಲಿನ ಫರ್‌ಹಿಲ್ ಪ್ಯಾಲೇಸ್, ಮೈಸೂರಿನಲ್ಲಿರುವ ಸುರಭಿ ಡೈರಿ, ಲೋಕರಂಜನ ಮಹಲ್, ಚೈತನ್ಯ ಹಾಲ್, ಇತ್ಯಾದಿಗಳು ಸೇರಿವೆ.
ತಮ್ಮ ಪತ್ನಿ ಪ್ರಮೋದಾದೇವಿ 40 ಲಕ್ಷ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ತಮ್ಮ ಬಳಿ 50 ಸಾವಿರ ರುಪಾಯಿ ನಗದು ಹಾಗೂ ಒಂದು ಮಾರುತಿ ಜೆನ್ ಕಾರು ಇರುವುದಾಗಿ ಒಡೆಯರ್ ಪ್ರಮಾಣಪತ್ರ ಸಲ್ಲಿಸಿದ್ದಾರೆ.
ಸುಳ್ಳುಸುಳ್ಳೇ ವಿವರಗಳು : ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಂಪುಟದ ಸಚಿವರು ಆಸ್ತಿ ಘೋಷಣೆ ಸಂಬಂಧ ಸುಳ್ಳು ಪ್ರಮಾಣ ಪತ್ರಗಳನ್ನು ಸಲ್ಲಿಸುತ್ತಿದ್ದಾರೆ ಎಂದು ಜಾತ್ಯತೀತ ಜನತಾದಳದ ಮುಖಂಡ ಎಸ್.ಕೆ.ಕಾಂತಾ ಆಪಾದಿಸಿದ್ದಾರೆ.
ಖರ್ಗೆ, ಧರ್ಮಸಿಂಗ್, ಖಮರುಲ್ ಇಸ್ಲಾಂ ಸೇರಿದಂತೆ ಅನೇಕ ಸಚಿವರು ಆಸ್ತಿ ಪ್ರಕಟಣೆಗೆ ಸಂಬಂಧಿಸಿದಂತೆ ಖೋಟಾ ವಿವರಗಳನ್ನು ಸಲ್ಲಿಸಿದ್ದಾರೆ. ಇವರುಗಳು ಆಸ್ತಿ ಸಂಪತ್ತಿನ ಬಗ್ಗೆ ನೈಜ ವಿವರಗಳನ್ನು ಶೀಘ್ರದಲ್ಲೇ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ಕಾಂತಾ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಕುರುಕ್ಷೇತ್ರ-2004












Click it and Unblock the Notifications