ಪುಲಿಟ್ಜರ್‌ಪ್ರಶಸ್ತಿಯಲ್ಲಿ ‘ಲಾಸ್‌ಏಂಜಲೀಸ್‌ ಟೈಮ್ಸ್‌’ಗೆ ಅಗ್ರಪಾಲು

ಪುಲಿಟ್ಜರ್‌ಪ್ರಶಸ್ತಿಯಲ್ಲಿ ‘ಲಾಸ್‌ಏಂಜಲೀಸ್‌ ಟೈಮ್ಸ್‌’ಗೆ ಅಗ್ರಪಾಲು
ಐದು ವಿಭಾಗದಿ ಪುಲಿಟ್ಜರ್‌ ಪತ್ರಿಕೋದ್ಯಮ ಪ್ರಶಸ್ತಿ ಪಡೆದ ಲಾ.ಏ.ಟೈಮ್ಸ್‌

ನ್ಯೂಯಾರ್ಕ್‌: ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ ‘ಪುಲಿಟ್ಜರ್‌-2004’ ಪ್ರಶಸ್ತಿ ಪ್ರಕಟಗೊಂಡಿದೆ. ಅಮೆರಿಕಾದ ‘ಲಾಸ್‌ ಏಂಜಲೀಸ್‌ ಟೈಮ್ಸ್‌ ’ಪತ್ರಿಕೆಯು(ಲಾ.ಏ.) ಪ್ರಕಟಿಸಿದ್ದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭುಗಿಲೆದ್ದಿದ್ದ ‘ಕಾಡ್ಗಿಚ್ಚು’ ಕುರಿತಾದ ವರದಿ ಸೇರಿದಂತೆ, ಪತ್ರಿಕೆ ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.

ಡೇವಿಡ್‌ ಬಾಸ್ಟ್ರೋ ಮತ್ತು ಲೋವೆಲ್‌ ಬರ್ಗ್‌ಮೆನ್‌ ಅವರ ‘ಅಮೆರಿಕಾದ ಕಾರ್ಮಿಕರ ನೋವು ಮತ್ತು ಸಾವು’ ಎಂಬ ವರದಿಗಾಗಿ ‘ನ್ಯೂಯಾರ್ಕ್‌ ಟೈಮ್ಸ್‌ ’ ಪತ್ರಿಕೆಯು ‘ಸಾರ್ವಜನಿಕಾ ಸೇವಾ’ ವಿಭಾಗದ ಪ್ರಶಸ್ತಿ ಪಡೆದಿದೆ.

‘ರಾಷ್ಟ್ರೀಯ ವರದಿ’ ವಿಭಾಗದಲ್ಲಿ ಲಾ.ಏ. ಪತ್ರಿಕೆಯು ವಾಲ್‌-ಮಾರ್ಟ್‌ ಕಂಪೆನಿಯ ಯಶಸ್ಸಿನ ಸಾಧನೆಯ ಕುರಿತ ವರದಿಗಾಗಿ ಪ್ರಶಸ್ತಿಗೆ ಭಾಜನವಾಗಿದೆ. ‘ತನಿಖಾ ವರದಿ’ ಗಾಗಿ ‘ದಿ ಬ್ಲೇಡ್‌’ ಪತ್ರಿಕೆಯ ಮೈಕಲ್‌ಡಿ. ಸಲ್ಹಾ, ‘ಟೊಲೆಡೋ’ ಪತ್ರಿಕೆಯ ಮಿಚ್ಚಿ ವೈಸ್‌ ಮತ್ತು ‘ಓಹಿ’ಯಾದ ಜ್ಯೋ ಮಹ್ರ್‌ ಪುರಸ್ಕೃತರಾಗಿದ್ದಾರೆ.

ಉಳಿದಂತೆ ವಿವರಣಾತ್ಮಕ ವರದಿಗಾಗಿ ‘ವಾಲ್‌ ಸ್ಟ್ರೀಟ್‌ ಜರ್ನಲ್‌’ ಪತ್ರಿಕೆಯ ಕೆವಿನ್‌ ಹೆಲ್ಲಿಕರ್‌ ಮತ್ತು ಥಾಮಸ್‌ ಎಮ್‌.ಬರ್ಟನ್‌ ಮತ್ತು ಇದೇ ಪತ್ರಿಕೆಯ ಡ್ಯಾನಿಯಲ್‌ ಗೋಲ್ಡನ್‌ ‘ಬೀಟ್‌ ರಿಪೋರ್ಟ್‌’ಗೆ ಪ್ರಶಸ್ತಿ ಪಡೆದರೆ ‘ಅಂತರಾಷ್ಟ್ರೀಯ ವರದಿ’ ಗಾಗಿ ವಾಷಿಂಗ್‌ಟನ್‌ ಪೋಸ್ಟ್‌ನ ಆ್ಯಂಟೋನಿ ಶದೀದ್‌ ಪ್ರಶಸ್ತಿ ಪಡೆದಿದ್ದಾರೆ.

ಪೀತ ಪತ್ರಿಕೋದ್ಯಮದ ಪಿತಾಮಹ ಪುಲಿಟ್ಜರ್‌ ಹೆಸರಿನಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ‘ನ್ಯೂ ಯಾರ್ಕ್‌ ಟೈಮ್ಸ್‌’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಮ್ಮ ‘ದಿ ಎಲ್ಲೊ ಕಿಡ್‌’ ಕಾರ್ಟೂನ್‌ ಮತ್ತು ಬರಹಗಳ ಮೂಲಕ ಅವರು ಈ ಬಿರುದಿಗೆ ಪಾತ್ರರಾಗಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+