ಪಾಕ್‌ಗೆ ‘ಬ್ಲಾಕ್‌ ಡಾಗ್‌’ ವಿಸ್ಕಿ, ಅಮೆರಿಕ-ಬ್ರಿಟನ್‌ಗೆ ಯುಬಿ ರಮ್‌

ಪಾಕ್‌ಗೆ ‘ಬ್ಲಾಕ್‌ ಡಾಗ್‌’ ವಿಸ್ಕಿ, ಅಮೆರಿಕ-ಬ್ರಿಟನ್‌ಗೆ ಯುಬಿ ರಮ್‌
ಭಾರತೀಯ ಮದ್ಯದ ಸೀಮೋಲ್ಲಂಘನದ ಸುದ್ದಿಗಳು...

ಬೆಂಗಳೂರು : ಭಾರತೀಯ ಸ್ಕಾಚ್‌ ವಿಸ್ಕಿ ‘ಬ್ಲಾಕ್‌ ಡಾಗ್‌’ ಪಾಕಿಸ್ತಾನ, ಶ್ರೀಲಂಕಾ ಹಾಗೂ ನೇಪಾಳಗಳಲ್ಲಿ ಶೀಘ್ರದಲ್ಲಿಯೇ ಸ್ಥಳೀಯವಾಗಿ ತಯಾರಾಗಲಿದೆ.

ಮ್ಯಾಕ್‌ಡೊವೆಲ್‌ ಕಂಪನಿಯ ಉತ್ಪನ್ನವಾದ ‘ಬ್ಲಾಕ್‌ ಡಾಗ್‌’ ವಿಸ್ಕಿಯನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ತಯಾರಿಸಲು ಸಂಸ್ಥೆ ಪರವಾನಗಿ ಪಡೆಯಲು ಪ್ರಯತ್ನಿಸುತ್ತಿದ್ದು , ಈ ಪ್ರಯತ್ನಗಳು ಪ್ರಗತಿಯಲ್ಲಿವೆ. ಅಂದಹಾಗೆ, ‘ಬ್ಲಾಕ್‌ ಡಾಗ್‌’ ವಿಸ್ಕಿಯನ್ನು ಸ್ಕಾಟ್‌ಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳುತ್ತಿದ್ದು , ಸ್ಥಳೀಯವಾಗಿ ಬಾಟಲ್‌ಗಳಲ್ಲಿ ತುಂಬಲಾಗುತ್ತಿದೆ.

ಭಾರತ ಹಾಗೂ ಪಾಕಿಸ್ತಾನಗಳಲ್ಲಿ ಬ್ಲಾಕ್‌ಡಾಗ್‌ ವಿಸ್ಕಿ ಜನಪ್ರಿಯ ಪೇಯವಾಗಿದೆ. ಉಭಯ ದೇಶಗಳ ವಿಭಜನೆಯ ಮುನ್ನ, ಬ್ರಿಟೀಷರ ದಿನಗಳಲ್ಲಿ ‘ಬ್ಲಾಕ್‌ ಡಾಗ್‌’ ವಿಸ್ಕಿಯನ್ನು ಸೆಲ್ಲರ್‌ಗಳಲ್ಲಿ ತುಂಬಿಸಿಡಲಾಗುತ್ತಿತ್ತು ಎಂದು ಯುಬಿ ಗ್ರೂಪ್‌ ಸ್ಪಿರಿಟ್ಸ್‌ ಡಿವಿಜನ್‌ ಅಧ್ಯಕ್ಷ ವಿಜಯ್‌ ಕೆ ರೇಖಿ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಯುಕೆ, ಯುಎಸ್‌ಗೆ ಯುಬಿ ರಮ್‌

ಬೆಂಗಳೂರು ಮೂಲದ ಯುಬಿ ಕಂಪನಿ ಉತ್ಪನ್ನಗಳ ಸೀಮೋಲ್ಲಂಘನದ ಪ್ರಯತ್ನ ಮುಂದುವರಿಸಿದ್ದು, ಅಮೆರಿಕ ಹಾಗೂ ಇಂಗ್ಲೆಂಡ್‌ಗಳಿಗೆ ಭಾರತೀಯ ರಮ್‌ ರಫ್ತು ಮಾಡಲು ಯೋಜಿಸಿದೆ. ಸೀಮೋಲ್ಲಂಘನದ ಮೊದಲ ಹಂತವಾಗಿ ಪ್ರಸಕ್ತ ವಿತ್ತ ವರ್ಷದಲ್ಲಿ 1 ಲಕ್ಷ ಕೇಸ್‌ಗಳನ್ನು ಯುಬಿ ಕಂಪನಿ ರಫ್ತು ಮಾಡಲಿದೆ.

ನಾವು ಅತ್ಯುತ್ತಮವಾದ ರಮ್‌ ಉತ್ಪಾದಿಸುತ್ತಿದ್ದು , ಈ ರಮ್‌ಗೆ ಪಶ್ಚಿಮದ ಮಾರುಕಟ್ಟೆಯಲ್ಲಿ ಬೇಡಿಕೆ ದೊರೆಯುವ ನಿರೀಕ್ಷೆಯಿದೆ. ಸಾಂಪ್ರದಾಯಿಕ ಬ್ರಾಂಡ್‌ಗಳ ಜೊತೆಗೆ ಪಶ್ಚಿಮದ ಮಾರುಕಟ್ಟೆಗಾಗಿ ಮಹಾರಾಜ ಎನ್ನುವ ಹೊಸ ಬ್ರಾಂಡ್‌ ಪರಿಚಯಿಸಲಾಗುವುದು ಎಂದು ಯುಬಿ ಗ್ರೂಪ್ಸ್‌ನ ವಿಜಯ್‌ ಕೆ ರೇಖಿ ತಿಳಿಸಿದ್ದಾರೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+