ಅಂತರರಾಷ್ಟ್ರೀಯ ಪಾತಕಿ ದಾವೂದ್ ಇಬ್ರಾಹಿಂ ರೂಪ ಬದಲು ?
ಅಂತರರಾಷ್ಟ್ರೀಯ ಪಾತಕಿ ದಾವೂದ್ ಇಬ್ರಾಹಿಂ ರೂಪ ಬದಲು ?
ರೂಪ ಪರಿವರ್ತನೆ ಮೂಲಕ ನಿಗೂಢ ಸ್ಥಳಕ್ಕೆ ಪಲಾಯನ ಮಾಡಲು ಸಿದ್ಧತೆ
ಪ್ರಸ್ತುತ ಪಾಕಿಸ್ತಾನದಲ್ಲಿ ನೆಲೆಸಿರುವ ದಾವೂದ್ ಇಬ್ರಾಹಿಂ, ರೂಪ ಪರಿವರ್ತನೆ ನಂತರ ಪಶ್ಚಿಮ ಏಷ್ಯಾದ ಗುಪ್ತ ಸ್ಥಳವೊಂದಕ್ಕೆ ಪಲಾಯನ ಮಾಡಲು ಉದ್ದೇಶಿಸಿದ್ದಾನೆ. ತನ್ನ ವಶಕ್ಕೆ ಒಪ್ಪಿಸಬೇಕೆಂದು ಪಾಕಿಸ್ತಾನಕ್ಕೆ ಭಾರತ ಸಲ್ಲಿಸಿರುವ 20 ಮಂದಿ ಉಗ್ರಗಾಮಿಗಳ ಪಟ್ಟಿಯಲ್ಲಿ ದಾವೂದ್ ಹೆಸರು ಮೊದಲಿಗಿದೆ.
ದಾವೂದ್‌ನ ಬಲಗೈಬಂಟನೆನ್ನಲಾದ ಛೋಟಾ ಶಕೀಲ್, ಹಾಜಿ ಮೊಹಮದ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾನೆ. ಟೈಗರ್ ಮೆಮೊನ್, ಅಹ್ಮದ್ ಜಮೀಲ್ ಎಂದು ಹೆಸರು ಬದಲಾಯಿಸಿಕೊಂಡಿದ್ದಾನೆ. ಇವರೆಲ್ಲರೂ 1993ರ ಮುಂಬೈ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಾಮೀಲಾದವರಾಗಿದ್ದಾರೆ. ಒಟ್ಟಿನಲ್ಲಿ ಭೂಗತ ದೊರೆಗಳೆಲ್ಲ ರೂಪ, ಹೆಸರು ಬದಲಿಸುವತ್ತ ಆಸಕ್ತಿ ವಹಿಸಿದ್ದಾರೆ. ಇದು ಎಲ್ಲಿಗೆ ತಲುಪುವುದೋ ನೋಡಬೇಕು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications