ಅಪ್ಪನಾದ ಅನಿಲ್‌ಕುಂಬ್ಳೆ : ಕ್ರಿಕೆಟ್ ಖುಷಿ ನಂತರ ದಾಂಪತ್ಯದ ಸಿಹಿ
ಅಪ್ಪನಾದ ಅನಿಲ್‌ಕುಂಬ್ಳೆ : ಕ್ರಿಕೆಟ್ ಖುಷಿ ನಂತರ ದಾಂಪತ್ಯದ ಸಿಹಿ
ತಾಯಿ-ಮಗು ಆರೋಗ್ಯ, ಶನಿವಾರ ಕುಂಬ್ಳೆ ಮರಳಿ ಪಾಕಿಸ್ತಾನಕ್ಕೆ
ಪುತ್ರೋತ್ಸವದ ಸಂದರ್ಭದಲ್ಲಿ ಒಂದು ರೀತಿಯ ಥ್ರಿಲ್ ಹಾಗೂ ಸಂತೋಷ ಉಂಟಾಗಿದೆ ಎಂದು ಅಪ್ಪನಾದ ಸಂಭ್ರಮವನ್ನು ಕುಂಬ್ಳೆ ಬಣ್ಣಿಸಿದರು. ಮಗು 4.2 ಕೆಜಿ ತೂಕವಿದೆ. ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಯಿತು ಎಂದು ಪ್ರಸವದ ಉಸ್ತುವಾರಿ ವಹಿಸಿದ್ದ ಖ್ಯಾತ ಪ್ರಸೂತಿ ತಜ್ಞೆ ಡಾ.ಕಾಮಿನಿರಾವ್ ಹೇಳಿದರು.
ತಾಯಿ ಮತ್ತು ಮಗು ಆರೋಗ್ಯಕರವಾಗಿದ್ದಾರೆ. ಕುಂಬ್ಳೆ ದಂಪತಿಗಳು ತುಂಬಾ ತುಂಬಾ ಸಂತಸದಲ್ಲಿದ್ದಾರೆ. ಮಗು ಮುದ್ದಾಗಿದೆ ಎಂದು ಡಾ.ಕಾಮಿನಿ ರಾವ್ ಹೇಳಿದರು.
ಪ್ರಸವ ಸಂದರ್ಭದಲ್ಲಿ ಪತ್ನಿಯ ಜೊತೆಯಿರಲು ಕುಂಬ್ಳೆ ಪಾಕಿಸ್ಥಾನದಿಂದ ಬೆಂಗಳೂರಿಗೆ ಗುರುವಾರ ಆಗಮಿಸಿದ್ದರು. ಭಾರತ ವಿಜಯ ಪತಾಕೆ ಹಾರಿಸಿದ ಮುಲ್ತಾನ್ ಟೆಸ್ಟ್‌ನಲ್ಲಿ ಅವರು ಎಂಟು ವಿಕೆಟ್ ಪಡೆದಿದ್ದರು. ಏ 3ರ ಶನಿವಾರ ಕುಂಬ್ಳೆ ತಂಡವನ್ನು ಮತ್ತೆ ಸೇರಿಕೊಳ್ಳುವರು. ಎರಡನೇ ಟೆಸ್ಟ್ ಸೋಮವಾರ (ಏ.5)ದಿಂದ ಲಾಹೋರ್‌ನಲ್ಲಿ ನಡೆಯಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications